blank

ಹಿಂದಿ ಹೇರಿಕೆ ಸಮರ: ರಾಜ್ಯ ಬಜೆಟ್​ನಲ್ಲಿ ₹ ಚಿಹ್ನೆ ಬದಲಿಗೆ ತಮಿಳಿನ ರೂ.! ಮತ್ತೊಮ್ಮೆ ಕೇಂದ್ರಕ್ಕೆ ಸ್ಟಾಲಿನ್​ ತಿರುಗೇಟು | TN

blank

ತಮಿಳುನಾಡು: ಪ್ರಸಕ್ತ 2025-26ರ ರಾಜ್ಯ ಬಜೆಟ್‌ನಲ್ಲಿ ತಮಿಳುನಾಡು ಸರ್ಕಾರ ಹಿಂದಿಯಲ್ಲಿರುವ ₹ ಚಿಹ್ನೆಯನ್ನು ಕೈಬಿಟ್ಟು, ತಮಿಳುನಾಡಿನ (TN) ಆಡಳಿತ ಭಾಷೆ ರೂ. ಅಕ್ಷರವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಮತ್ತೊಮ್ಮೆ ಸಮರ ಸಾರಿದೆ. ಈ ವಿಷಯವನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಜನತೆಗೆ ಟ್ವೀಟ್​ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವ ಕ್ರಿಕೆಟ್​ನಲ್ಲಿ ಭಾರತ ತಂಡದಿಂದ ಮಾತ್ರ ಇದು ಸಾಧ್ಯ; ಕೆ.ಎಲ್​. ರಾಹುಲ್​ ಕೊಂಡಾಡಿದ ಮಿಚೆಲ್​ ಸ್ಟಾರ್ಕ್​ | Mitchell Starc

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರದ ಮುಖೇನ ‘ಹಿಂದಿ ಹೇರಿಕೆ’ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಆಡಳಿತಾರೂಢ ಡಿಎಂಕೆ ತೀವ್ರ ಕಿಡಿಕಾರಿತ್ತು. ಹಲವು ದಿನಗಳಿಂದ ಈ ವಿಷಯ ಬೂದಿ ಮುಚ್ಚಿದ ಕೆಂಡದಂತಿತ್ತು. ಇದೀಗ ಮತ್ತೆ ಹಿಂದಿ ಹೇರಿಕೆ ವಿಚಾರ ಮುನ್ನೆಲೆಗೆ ಬಂದಿದ್ದು, ಶುಕ್ರವಾರ (ಮಾ.14) ಮಂಡಿಸಲಿರುವ ರಾಜ್ಯ ಬಜೆಟ್​ ಬೆನ್ನಲ್ಲೇ ಹಿಂದಿಯಲ್ಲಿರುವ ರೂ. ಚಿಹ್ನೆಯನ್ನು ಬದಲಾಯಿಸುವ ನಿರ್ಧಾರವನ್ನು ಸಿಎಂ ಸ್ಟಾಲಿನ್​ ಮುನ್ನೆಲೆಗೆ ತಂದಿದ್ದಾರೆ.

ಈ ಹಿಂದೆ ಕೇಂದ್ರ ಸರ್ಕಾರದ ಎನ್​ಇಪಿ ನಿಯಮವನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ತಕರಾರು ತೆಗೆದಿದ್ದ ಸ್ಟಾಲಿನ್​, ಯಾವುದೇ ಕಾರಣಕ್ಕೂ ಕೇಂದ್ರದ ಹಿಂದಿ ಹೇರಿಕೆಯನ್ನು ನಾವು ಒಪ್ಪುವುದಿಲ್ಲ. 10 ಕೋಟಿ ರೂ. ಕೊಟ್ಟರೂ ಎನ್​ಇಪಿಯನ್ನು ಅಳವಡಿಸಲು ಅನುಮತಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದರು. ಅಂದಿನಿಂದಲೂ ಕೇಂದ್ರದ ವಿರುದ್ಧ ಸಮರ ಸಾರುತ್ತಿರುವ ತಮಿಳುನಾಡು ಸಿಎಂ, ಇದೀಗ ಬಜೆಟ್​ನಲ್ಲಿ ಹಿಂದಿಯಲ್ಲಿರುವ ರೂಪಾಯಿ ಚಿಹ್ನೆಯನ್ನು ಆಡಳಿತ ಭಾಷೆಗೆ ಬದಲಿಸುವ ಮೂಲಕ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ.

ವಿಶ್ವ ಕ್ರಿಕೆಟ್​ನಲ್ಲಿ ಭಾರತ ತಂಡದಿಂದ ಮಾತ್ರ ಇದು ಸಾಧ್ಯ; ಕೆ.ಎಲ್​. ರಾಹುಲ್​ ಕೊಂಡಾಡಿದ ಮಿಚೆಲ್​ ಸ್ಟಾರ್ಕ್​ | Mitchell Starc

Share This Article

ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ? ಹಾಗಿದ್ರೆ, ತಪ್ಪದೇ ಈ 5 ಹಣ್ಣುಗಳನ್ನು ಸೇವಿಸಿ | Digestion

Digestion: ಇಂದಿನ ಕಾಲಮಾನದಲ್ಲಿ ಬಹುತೇಕರು ತಿಂದ ಅನ್ನವನ್ನು ಅರಗಿಸಿಕೊಳ್ಳಲು ತೀರ ಪರದಾಡುವಂತ ಹಂತವನ್ನು ತಲುಪಿದ್ದಾರೆ. ಇಷ್ಟಪಟ್ಟ…

ಸಣ್ಣ ವಿಷಯಗಳಿಗೂ ಒತ್ತಡಕ್ಕೆ ಒಳಗಾಗುತ್ತಿದ್ದೀರಾ?; ಹಾಗಾದ್ರೆ ತಪ್ಪಿದ್ದಲ್ಲ ಈ ಕಾಯಿಲೆಗಳ ಸಮಸ್ಯೆ | Health Tips

ಕೆಲವೊಮ್ಮೆ ನಮ್ಮ ಕೆಲವು ಅಭ್ಯಾಸಗಳು ನಮ್ಮ ದೇಹದಲ್ಲಿ ಹೇಗೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ.…

ಗರ್ಭಧಾರಣೆಯ 7ನೇ ತಿಂಗಳಿನಿಂದ ಅರಿಶಿನದೊಂದಿಗೆ ಹಸುವಿನ ಹಾಲು ಸೇವಿಸಿದ್ರೆ ಸಾಮಾನ್ಯ ಹೆರಿಗೆ ಆಗುವುದೇ; ತಜ್ಞರು ಹೇಳುವುದೇನು? | Health Tips

ಗರ್ಭಾವಸ್ಥೆಯಲ್ಲಿ ಪ್ರತಿ ಮಹಿಳೆ ತನ್ನ ಹೆರಿಗೆ ಸಾಮಾನ್ಯವಾಗಿರಬೇಕೆಂದು ಬಯಸುತ್ತಾರೆ. ವಾಸ್ತವವಾಗಿ ಸಿ-ಸೆಕ್ಷನ್ ಅನೇಕ ಅಡ್ಡಪರಿಣಾಮಗಳನ್ನು ಹೊಂದಿದೆ…