

ಚೆನ್ನೈ: ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ 'ಗಂಡ'ನ ಚಿಂತೆ ಎಂಬಂತಾಗಿದೆ ತಮಿಳುನಾಡಿನಲ್ಲಿನ ಈಗಿನ ಪರಿಸ್ಥಿತಿ. ಅದಕ್ಕೆ ಕಾರಣವಾಗಿರುವುದು ಸರ್ಕಾರ ಹೊಸ ಆದೇಶ. ಅದೇನೆಂದರೆ ಅಲ್ಲಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕ ಸ್ಥಾಪಿಸುವಂತೆ ಸರ್ಕಾರ ಇದೀಗ ಆದೇಶವೊಂದನ್ನು ಹೊರಡಿಸಿದೆ.
ಚೆನ್ನೈನ ಮರೀನಾ ಬೀಚ್ನಲ್ಲಿ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಸ್ಮಾರಕವನ್ನು ನಿರ್ಮಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ತಮಿಳುನಾಡಿನಲ್ಲಿನ ಭಾರಿ ಮಳೆಯಿಂದಾಗಿ ಮರೀನಾ ಬೀಚ್ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನು ಮರೀನಾ ಬೀಚ್ನಲ್ಲಿ ಮಾಜಿ ಸಿಎಂ ಅವರ ಸ್ಮಾರಕ ನಿರ್ಮಾಣಕ್ಕಾಗಿ ಅಲ್ಲಿನ ಸರ್ಕಾರ ಈ ಸಂದರ್ಭದಲ್ಲಿ ಆದೇಶ ಹೊರಡಿಸಿರುವುದಕ್ಕೆ ಜನರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ.