ತಿರುಪತಿ ತಿರುಮಲ ಪಾದಯಾತ್ರೆ ಮಂಡಲ ವರ್ಷಾಚರಣೆ; ಏ.20ಕ್ಕೆ ನರನ ನಡಿಗೆ ನಾರಾಯಣನೆಡೆಗೆ ಕಾರ್ಯಕ್ರಮ

thir
Published on

ಬೆಂಗಳೂರು: 1977ರಲ್ಲಿ ಸ್ಥಾಪನೆಯಾಗಿರುವ ಶ್ರೀತಿರುಪತಿ ತಿರುಮಲ ಪಾದಯಾತ್ರೆ ಸೇವಾ ಕೈಂಕರ್ಯ ಟ್ರಸ್ಟ್ ಕಳೆದ 48 ವರ್ಷಗಳಿಂದ ಪಾದಯಾತ್ರೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಒಂದು ಮಂಡಲ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಮಂಗಳವಾರ (ಏ.20) ಆಯೋಜಿಸಲಾಗಿದೆ.

ಭೂವೈಕುಂಠ ಎಂದೇ ಪ್ರಸಿದ್ಧವಾಗಿರುವ ತಿರುಪತಿ ತಿರುಮಲ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ಹೋಗುವುದಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆ ಯಶಸ್ವಿಯಾಗಿ 48 ವರ್ಷ ಪಾದಯಾತ್ರೆ ಪೂರೈಸಿದ್ದು, ಮಂಡಲ ವರ್ಷಾಚರಣೆಯನ್ನು ಅಂಗವಾಗಿ ‘ನರನ ನಡಿಗೆ ನಾರಾಯಣನೆಡೆಗೆ’ ಎಂಬ ೋಷ ವಾಕ್ಯದೊಂದಿಗೆ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.

ಜಯನಗರದ 1ನೇ ಬ್ಲಾಕ್‌ನಲ್ಲಿರುವ ಅಯೋಧ್ಯಾ ಕಲ್ಯಾಣಮಂಟಪದಲ್ಲಿ ಅಂದು ಬೆಳಗ್ಗೆ 7 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಹರಿಹರಪುರ ಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಟಿಟಿಡಿ ಸದಸ್ಯ ನರೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net