

ಅಮರಾವತಿ: ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದ್ವಾರಕಾ ತಿರುಮಲ ರಾವ್ ಅವರು ತಿರುಪತಿ ಲಡ್ಡು ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯನ್ನು ಅಮಾನತುಗೊಳಿಸಿದ್ದಾರೆ.
ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಅಕ್ಟೋಬರ್ 3ರವರೆಗೆ ತನಿಖೆಯನ್ನು ತಡೆಹಿಡಿಯಲಾಗಿದೆ. ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಕಲಬೆರಕೆ ನಡೆದಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸುವ ಹೊಣೆಯನ್ನು ಎಸ್ಐಟಿಗೆ ವಹಿಸಲಾಗಿತ್ತು.
"ತನಿಖೆಯ ಸಮಗ್ರತೆಯನ್ನು ಕಾಪಾಡುವ ಮುನ್ನೆಚ್ಚರಿಕೆಯಾಗಿ ತನಿಖೆಯನ್ನು ವಿರಾಮಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಮಾನತು ಮಾಡುವುದರಿಂದ ಯಾವುದೇ ಸಂಭಾವ್ಯ ತೊಡಕುಗಳನ್ನು ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಇದು ಮಾಡಲಾಗಿದೆ. ಸುಪ್ರೀಂ ಕೋರ್ಟ್ ತನ್ನ ಮಾರ್ಗದರ್ಶನ ನೀಡಿದ ನಂತರ ಅದರಂತೆ ತನಿಖೆ ಮುಂದುವರೆಯುತ್ತದೆ ಎಂದು ದ್ವಾರಕಾ ತಿರುಮಲ ರಾವ್ ಅವರು ತಿಳಿಸಿದ್ದಾರೆ. ಸೋಮವಾರ, ಎಸ್ಐಟಿ ತಿರುಮಲದ ಹಿಟ್ಟಿನ ಗಿರಣಿಯಲ್ಲಿ ತುಪ್ಪವನ್ನು ಸಂಗ್ರಹಿಸಿ, ಲಡ್ಡುಗಳನ್ನು ತಯಾರಿಸಲು ಬಳಸುವ ಮೊದಲು ಲ್ಯಾಬ್ನಲ್ಲಿ ಪರೀಕ್ಷಿಸಲಾಯಿತು.
ಹಿಂದಿನ ಜಗನ್ ಮೋಹನ್ ರೆಡ್ಡಿ ಸರ್ಕಾರದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿತ್ತು ಎಂಬ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಹಿರಂಗ ಹೇಳಿಕೆಯನ್ನು ಸೋಮವಾರ, ಸುಪ್ರೀಂಕೋರ್ಟ್ ಗಮನಿಸಿದಾಗ, ರಾಜಕೀಯದಿಂದ ದೇವರುಗಳನ್ನು ದೂರವಿಡಬೇಕು ಎಂದಿದೆ.
“ಇದು ಬಳಸಿದ ತುಪ್ಪ ಅಲ್ಲ ಎಂಬುದು ವರದಿಯಿಂದ ಸ್ಪಷ್ಟವಾಗಿದೆ, ನಿಮಗೆ ಖಚಿತವಾಗದಿದ್ದರೆ, ನೀವು ಅದನ್ನು ಹೇಗೆ ಸಾರ್ವಜನಿಕವಾಗಿ ಹೇಳಿದ್ದೀರಿ?” ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠ ಹೇಳಿದೆ.
ತನಿಖಾ ವರದಿ ಬರುವ ಮುನ್ನವೇ ಮಾಧ್ಯಮಗಳ ಮುಂದೆ ಹೋಗವ ಅವಶ್ಯಕತೆ ಏನಿತ್ತು. ನೀವು ಸಂವಿಧಾನಿಕ ಹುದ್ದೆಯಲ್ಲಿ ಇರುವವರು. ರಾಜಕೀಯದಿಂದ ದೂರವಿಡಬೇಕೆಂದು ನಿರೀಕ್ಷಿಸುತ್ತೇನೆ, ಲ್ಯಾಬ್ ವರದಿ ಬಂದಿದ್ದು, ಜುಲೈ ತಿಂಗಳಲ್ಲಿ ನಿಮ್ಮ ಹೇಳಿಕೆ ಬಿಡುಗಡೆಯಾಗಿದ್ದು ಸೆಪ್ಟೆಂಬರ್ನಲ್ಲಿ ಅಲ್ಲದೆ, ಲ್ಯಾಬ್ ವರದಿಯೂ ಸ್ಪಷ್ಟವಾಗಿಲ್ಲ. ಇದಕ್ಕೆ ನಿಮ್ಮ ಬಳಿ ಸಾಕ್ಷ್ಯ ಇದೆಯೇ ? ಎಂದು ನ್ಯಾಯ ಪೀಠ ಹೇಳಿದೆ.