Andhra Pradesh | ಹೊಸ ಮದ್ಯ ನೀತಿ ಪ್ರಕಟಿಸಿದ ಆಂಧ್ರ ಸರ್ಕಾರ: 5.500 ಕೋಟಿ ರೂ. ಆದಾಯ ನಿರೀಕ್ಷೆ!

andra
Published on

ಅಮರಾವತಿ: ಆಂಧ್ರಪ್ರದೇಶದ Andhra Pradesh ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ನೇತೃತ್ವದ ಎನ್​ಡಿಎ ಸರ್ಕಾರ ಹೊಸ ಮದ್ಯ ನೀತಿಯನ್ನು ಪ್ರಕಟಿಸಿದೆ.

ಹರಿಯಾಣ ಮತ್ತು ಇತರೆ ರಾಜ್ಯಗಳ ಮಾದರಿಯಲ್ಲಿ ಖಾಸಗಿ ಚಿಲ್ಲರೆ ವ್ಯಾಪಾರಿಗಳಿಗೆ ಮದ್ಯ ಮಾರಾಟ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ರಾಜ್ಯ ಸರ್ಕಾರವು 5,500 ಕೋಟಿ ಆದಾಯ ಗಳಿಸುವ ನಿರೀಕ್ಷೆ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

ಇತರ ರಾಜ್ಯಗಳಲ್ಲಿ ಇರುವ ಉತ್ತಮ ಅಬಕಾರಿ ನೀತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ಬಳಿಕ ಹೊಸ ಮದ್ಯ ನೀತಿಯನ್ನು ಜಾರಿಗೆ ತರಲಾಗಿದೆ. ಆಂಧ್ರಪ್ರದೇಶ ಸರ್ಕಾರವು ರಾಜ್ಯಾದ್ಯಂತ 3,736 ಮದ್ಯ ಮಾರಾಟ ಮಳಿಗೆಗಳನ್ನು ಖಾಸಗೀಕರಣಗೊಳಿಸಲು ನಿರ್ಧರಿಸಿದೆ. ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಹೊಸ ಮದ್ಯ ನೀತಿಯು ಇದೇ ಅಕ್ಟೋಬರ್ 12ರಿಂದ ಜಾರಿಗೆ ಬರಲಿದೆ.

ಈ ಹೊಸ ಮದ್ಯ ನೀತಿಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಮೊದಲ ವರ್ಷದಲ್ಲಿ 10 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ 50 ಲಕ್ಷ ರೂ. 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಪ್ರತಿ ಮದ್ಯದ ಅಂಗಡಿಯಿಂದ 85 ಲಕ್ಷ ರೂ. ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ.

Chandrababu Naidu

ಮದ್ಯದ ಬೆಲೆಯನ್ನು ಕೈಗೆಟುಕುವಂತೆ ಮಾಡಲು ರಾಜ್ಯ ಸರ್ಕಾರವು ಈ ಹೊಸ ಮದ್ಯ ನೀತಿಯನ್ನು ಪರಿಚಯಿಸಿದೆ. ಒಟ್ಟಿನಲ್ಲಿ ದುಬಾರಿ ಬೆಲೆಯ ಕಿರುಕುಳ ನೀಡಿ ಜೇಬು ಖಾಲಿ ಮಾಡಿಕೊಂಡಿರುವ ಮಾದಕ ವ್ಯಸನಿಗಳಿಗೆ ಇನ್ಮುಂದೆ ನೆಮ್ಮದಿ ಸಿಗಲಿದೆ. ಎಪಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮದ್ಯ ದೊರೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net