

ತಿರುಪತಿ: ದೇವರ ದರ್ಶನ ಪಡೆದುಕೊಂಡು ಬರುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಸಾವಿಗೀಡಾಗಿದ್ದಾರೆ. ಮಾರ್ಗಮಧ್ಯೆ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇವರು ಮೃತಪಟ್ಟಿದ್ದಾರೆ. ತಿರುಪತಿ-ಕಾಳಹಸ್ತಿ ನಡುವಿನ ರಾಷ್ಟ್ರಿಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.
ತಿರುಪತಿಯ ಮಿಟ್ಟಕಂಡ್ರಿಗ ಗ್ರಾಮದಲ್ಲಿ ಇಂದು ಮಧ್ಯಾಹ್ನ ಈ ಅಪಘಾತ ನಡೆದಿದೆ. ಕಾರಿನಲ್ಲಿ ಒಟ್ಟು ಏಳು ಮಂದಿ ಇದ್ದಿದ್ದು, ಆ ಪೈಕಿ 16 ವರ್ಷದ ಬಾಲಕನೊಬ್ಬ ಮಾತ್ರ ಉಳಿದುಕೊಂಡಿದ್ದಾನೆ. ಸತ್ತವರೆಲ್ಲೂ ವಿಜಯವಾಡದ ಕೃಷ್ಣಾಲಂಕ ಪ್ರದೇಶದ ಒಂದೇ ಕುಟುಂಬದವರು.
ವಿಜಯವಾಡದಿಂದ ಶುಕ್ರವಾರ ರಾತ್ರಿ 8ಕ್ಕೆ ಹೊರಟಿದ್ದ ಇವರು ಭಾನುವಾರ ಬೆಳಗ್ಗೆ ದೇವರ ದರ್ಶನ ಪಡೆದು ವಾಪಸ್ ಹೊರಟಿದ್ದರು. ಬದುಕುಳಿದ ಬಾಲಕನ ಕಾಲು ಮುರಿತಕ್ಕೆ ಒಳಗಾಗಿದ್ದು, ಸತ್ತವರ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಕಲೆ ಹಾಕಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.