ಆಂಧ್ರಪ್ರದೇಶದ ತಿರುಪತಿ ಇನ್ನು ಶ್ರೀಬಾಲಾಜಿ ಜಿಲ್ಲೆ

Tirupathi Balaji
Published on

ಅಮರಾವತಿ: ತಿರುಪತಿ ಇನ್ನು ಜಿಲ್ಲಾ ಕೇಂದ್ರವಾಗಲಿದ್ದು ಅದಕ್ಕೆ ಶ್ರೀ ಬಾಲಾಜಿ ಜಿಲ್ಲೆ ಎಂದು ಹೆಸರಿಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಸರ್ಕಾರದ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಮಾಡುವುದಕ್ಕೆ ಜನರಲ್ಲಿ ಖುಷಿ ಮನೆ ಮಾಡಿದ್ದರೂ ಬಾಲಾಜಿ ಜಿಲ್ಲೆ ಎಂದು ನಾಮಕರಣ ಮಾಡುವುದಕ್ಕೆ ಅತೃಪ್ತಿ ಸೂಚಿಸಿದ್ದಾರೆ.

ಶ್ರೀ ಬಾಲಾಜಿ ಎನ್ನುವುದು ವಿಶೇಷವಾಗಿ ಉತ್ತರ ಭಾರತದಲ್ಲಿ ಮಾತ್ರ ಪ್ರಚಲಿತದಲ್ಲಿರುವ ಹೆಸರು ಎನ್ನುವುದು ಅವರ ವಾದವಾಗಿದೆ. ‘ಸರಳವಾಗಿ ತಿರುಪತಿ ಎಂದು ಹೆಸರಿಸಿದರೆ ಉತ್ತಮ. ಇಲ್ಲವೇ ಶ್ರೀ ವೆಂಕಟೇಶ್ವರ ಅಥವಾ ಶ್ರೀ ಶ್ರೀನಿವಾಸ ಎಂದು ನಾಮಕರಣ ಮಾಡಿದರೆ ಸಾಕಿತ್ತು’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಡ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್.ಟಿ. ರಾಮರಾವ್ ಜಿಲ್ಲೆ ಎಂದು ಮರುನಾಮಕರಣ ಮಾಡಲು ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಸರ್ಕಾರ ನಿರ್ಧರಿಸಿದೆ. ಇದೊಂದು ಮಹತ್ವದ ರಾಜಕೀಯ ನಡೆಯೆಂದು ಭಾವಿಸಲಾಗಿದೆ. ಯಾವುದಾದರೊಂದು ಜಿಲ್ಲೆಗೆ ಎನ್​ಟಿಆರ್ ಹೆಸರಿಡುವುದಾಗಿ ಕಳೆದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಮುಖ್ಯಮಂತ್ರಿ ವೈ.ಎಸ್. ಜಗನ್​ವೋಹನ್ ರೆಡ್ಡಿ ಆಶ್ವಾಸನೆ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net