ಮತ್ತೆ ಬರಲಿದೆ ಡಬಲ್ ಡೆಕರ್ ಬಸ್​: ಇನ್ನು ಇದೇ 'ಬೆಸ್ಟ್'​ ಎಂದರು ಮಿನಿಸ್ಟರ್​

BEST F
Published on

ಮುಂಬೈ: ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಡಬಲ್​ ಡೆಕರ್ ಬಸ್​​ಗಳು ಓಡಾಡುತ್ತಿದ್ದುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥವೇ. ಅಂಥ ಬಸ್​ಗಳು ಸದ್ಯದಲ್ಲೇ ಮತ್ತೆ ರಸ್ತೆಗಿಳಿಯಲಿವೆ. ಇನ್ನು ಮುಂದೆ ಇವೇ 'ಬೆಸ್ಟ್' ಎಂಬ ಅಭಿಪ್ರಾಯದೊಂದಿಗೆ ಇಂಥದ್ದೊಂದು ನಿರ್ಧಾರವನ್ನು ತಳೆಯಲಾಗಿದೆ.

ಹೌದು.. ಒಂದೆರಡಲ್ಲ, ಹಲವು ಡಬಲ್ ಡೆಕರ್ ಬಸ್​ಗಳು ಇನ್ಮುಂದೆ ರಸ್ತೆಗೆ ಇಳಿಯಲಿವೆ. ಆದರೆ ಅದು ಬೆಂಗಳೂರಿನಲ್ಲಲ್ಲ, ಬದಲಿಗೆ ಮುಂಬೈನಲ್ಲಿ. ಮುಂಬೈನ ಬಾಂಬೆ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್​​ಪೋರ್ಟ್​ (BEST) ಮತ್ತು ಬೃಹನ್ಮುಂಬೈ ಮಹಾನಗರ ಪಾಲಿಕೆ ಜಂಟಿಯಾಗಿ ಡಬಲ್ ಡೆಕರ್​ ಬಸ್​ಗಳನ್ನು ರಸ್ತೆಗಿಳಿಸಲಿವೆ.

ಅಂದಹಾಗೆ ಹೊಸದಾಗಿ ರಸ್ತೆಗಿಳಿಯಲಿರುವ ಈ ಡಬಲ್​ ಡೆಕರ್​ ಬಸ್​ಗಳು ಎಲೆಕ್ಟ್ರಿಕ್ ವಾಹನಗಳಾಗಿರುವುದರಿಂದ ಶಬ್ದ ಹಾಗೂ ಹೊಗೆ ಪ್ರಮಾಣ ಶೂನ್ಯವಾಗಿರಲಿದೆ. ಇದು ಪರಿಸರಸ್ನೇಹಿ ಆಗಿರುವುದರಿಂದ 900 ಎಸಿ ಡಬಲ್ ಡೆಕರ್ ಬಸ್​ಗಳನ್ನು ರಸ್ತೆಗಿಳಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರದ ಸಚಿವ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net