ಭಾರತ ಜಗತ್ತಿನಲ್ಲಿಯೇ ವಿಶ್ವ ಗುರು : ಕಯ್ಯರು ನಾರಾಯಣ ಶೆಟ್ಟಿ ಹೇಳಿಕೆ

New Project (18)
Published on

ಉಪ್ಪಳ: ಭಾರತ ಜಗತ್ತಿನಲ್ಲಿ ವಿಶ್ವ ಗುರು ಆಗುತ್ತಿದೆ. ದೇಶದ ಸೈನಿಕ ಶಕ್ತಿ ಆಪರೇಶನ್ ಸಿಂಧೂರ ಮೂಲಕ ಜಗತ್ತು ಮತ್ತೆ ಕಂಡಿದೆ. ಉತ್ತರ ನೀಡಲು ಹೊರಟರೆ ಭಾರತದ ಶಕ್ತಿಯನ್ನು ಮಣಿಸಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ನಿವೃತ್ತ ಸೇನಾನಿ ಕಯ್ಯರು ನಾರಾಯಣ ಶೆಟ್ಟಿ ಹೇಳಿದರು.

ಬಾಯಿಕಟ್ಟೆಯಿಂದ ಪೈವಳಿಕೆ ಪೇಟೆ ತನಕ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಬುಧವಾರ ತಿರಂಗಾ ಯಾತ್ರೆಯನ್ನು ನಿವೃತ್ತ ಸೈನಿಕ ವಸಂತ್ ಕೃಷ್ಣ ಶರ್ಮ, ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅವರಿಗೆ ಧ್ವಜ ಹಸ್ತಾಂತರಿಸಿ ಯಾತ್ರೆಗೆ ಚಾಲನೆ ನೀಡಿದರು.

ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿವೃತ್ತ ಸೇನಾನಿ ಐತಪ್ಪ ಅಡ್ಯಂತ್ತಾಯ ಉಪಸ್ಥಿತರಿದ್ದರು. ಎಸ್.ಸಿ.ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ.ಕೆ.ಕಯ್ಯರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ, ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೊಂಡ, ಸದಾಶಿವ ಚೇರಾಲ್, ಮಂಜುನಾಥ್ ಶೆಟ್ಟಿ, ಸಂದೀಪ್ ಬಾಯಾರ್, ಪ್ರವೀಣ್ ಪಟ್ಲ, ಸತ್ಯಶಂಕರ್ ಉಪಸ್ಥಿತರಿದ್ದರು. ಕೆ.ವಿ.ಭಟ್, ಸನತ್ ರೈ, ಬಾಲಕೃಷ್ಣ, ಪುಷ್ಪಲಕ್ಷ್ಮೀ, ಜಯಲಕ್ಷ್ಮೀ ಭಟ್, ಮಮತಾ, ರಾಜೀವಿ, ತುಳಸಿ ಕುಮಾರಿ, ಗಣೇಶ ಪ್ರಸಾದ್, ನಾಗೇಶ್ ಬಳ್ಳೂರು, ಪೊಯ್ಯೆ ಭಾಸ್ಕರ್ ನೇತೃತ್ವ ನೀಡಿದರು. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಯತೀರಾಜ್ ಶೆಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net