ರಂಗಾಯಣದಲ್ಲಿ 'ಟಿಪ್ಪು ನಿಜ ಕನಸುಗಳು' ನಾಟಕ ಪ್ರದರ್ಶನ; ಸತ್ಯ ಸಂಗತಿ ತಿಳಿಸುವ ಉದ್ದೇಶವಿದೆ ಎಂದ ನಿರ್ದೇಶಕ!

ಟಿಪ್ಪು ನಿಜ ಕನಸುಗಳು
Published on

ಮೈಸೂರು: 'ಟಿಪ್ಪು ನಿಜ ಕನಸುಗಳು' ಎಂಬ ನಾಟಕ ನವೆಂಬರ್ 20 ರಂದು ರಂಗಾಯಣದಲ್ಲಿ ಮೊದಲ ಪ್ರದರ್ಶನ ಕಾಣಲಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಈ ನಾಟಕವನ್ನು ಬರೆದು ನಿರ್ದೇಶಿಸಿದ್ದಾರೆ.

ನಾಟಕ ಕುರಿತು ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡವನ್ನು ಕೊಂದ ಟಿಪ್ಪು ಎಂಬ ಮುಸ್ಲಿಂ ಸುಲ್ತಾನ್​ನನ್ನು ಕನ್ನಡ ಪ್ರೇಮಿ ಎಂಬ ಬಿಂಬಿಸಲಾಗಿದೆ. ಟಿಪ್ಪುವಿನ ಅತಿ ರಂಜಿತ ಸುಳ್ಳು ಚರಿತ್ರೆಯ ಅಸಲಿಯತ್ತನ್ನು ಬಯಲು ಮಾಡುವುದು ಈ ನಾಟಕದ ಉದ್ದೇಶ ಎಂದು ಹೇಳಿದ್ದಾರೆ.

ಡೋಂಗಿ ಬುದ್ದಿಜೀವಿಗಳು ಟಿಪ್ಪು ವಿಶ್ವಧರ್ಮ ಪ್ರೇಮಿ ಎಂಬಂತೆ ಬುದ್ದಿಜೀವಿಗಳು ಬಿಂಬಿಸಿದ್ದಾರೆ. ಟಿಪ್ಪುವಿನ ಬಗ್ಗೆ ಸತ್ಯ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ನಾಟಕ ಪ್ರದರ್ಶಿಸಲಾಗುತ್ತಿದೆ. ಇದಕ್ಕಾಗಿ 30 ಕಲಾವಿದರ ತಂಡ ರಚನೆಯಾಗಿದೆ. ವಿವಿಧೆಡೆ 100 ಪ್ರದರ್ಶನ ಮಾಡುವ ಉದ್ಧೇಶವಿದೆ. 3 ಗಂಟೆ 20 ನಿಮಿಷದ ನಾಟಕ ಇದಾಗಿದೆ. ಮೊದಲ ಪ್ರದರ್ಶನ ಕಾರ್ಯಕ್ರಮದಲ್ಲಿ ಹಿರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ, ಸಂಸದ ಪ್ರತಾಪಸಿಂಹ, ಲೇಖಕ ರೋಹಿತ್ ಚಕ್ರತೀರ್ಥ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ನಾಟಕವನ್ನು ಕೃತಿಯ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಇದಕ್ಕೆ ಎಸ್.ಎಲ್. ಭೈರಪ್ಪ ಮುನ್ನುಡಿ ಹಾಗೂ ಚಕ್ರವರ್ತಿ ಸೂಲಿಬೆಲೆ ಹಿನ್ನುಡಿ ಬರೆದಿದ್ದಾರೆ ಎಂದು ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net