

ಆನೇಕಲ್: ಶಾಲಾ ಬಸ್ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಸು ರೋಡ್ ಡಿವೈಡರ್ ಮೇಲೆ ತಿರುಗಿ ನಿಂತಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ನಲ್ಲಿ ನಡೆದಿದೆ. ಅಪಘಾತಕ್ಕೀಡಾದ ಖಾಸಗಿ ಶಾಲೆಯ ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತಮಿಳುನಾಡಿನ ಹೊಸೂರಿನ ಸೆವೆಂತ್ ಡೇ ಶಾಲೆಯ ಬಸ್, ಬೆಂಗಳೂರು-ಹೊಸೂರು ಮುಖ್ಯರಸ್ತೆಯ ಹೊಸೂರು ಚೆಕ್ ಪೋಸ್ಟ್ ಬಳಿ ಹೋಗುತ್ತಿತ್ತು. ಆಗ ಟಿಪ್ಪರ್ ಲಾರಿಯೊಂದು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆಯಿತು. ಈ ಪರಿಣಾಮ, ಬಸ್ ಡಿವೈಡರ್ ಮೇಲೆ ತಿರುಗಿ ನಿಂತಿತು.
ಈ ದುರ್ಘಟನೆಯಲ್ಲಿ ಬಸ್ ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ ಏಳು ಜನ ವಿದ್ಯಾರ್ಥಿಗಳು ಇದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.