More

    “2030 ರ ವೇಳೆಗೆ ಭಾರತ ಪೆಟ್ರೋಲ್​-ಡೀಸೆಲ್​ ರೀಫೈನಿಂಗ್​ ಸಾಮರ್ಥ್ಯ ಹೆಚ್ಚಿಸಬೇಕು”

    ನವದೆಹಲಿ: ಪೆಟ್ರೋಲ್-ಡಿಸೇಲ್​ಗಳ ಬೆಲೆ ಏರಿಕೆಯಿಂದಾಗಿ ಜನರು ಎಲೆಕ್ಟ್ರಿಕ್​ ವಾಹನಗಳೂ ಸೇರಿದಂತೆ ಪರ್ಯಾಯ ಇಂಧನ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಈ ತೈಲ ಇಂಧನಗಳ ಬೇಡಿಕೆಯು ಸದ್ಯಕ್ಕೆ ತಗ್ಗುವ ಪ್ರಮೇಯವಿಲ್ಲ, ಬದಲಿಗೆ ದೇಶದ ತೈಲ ಇಂಧನ ತಯಾರಿಕೆ ಸಾಮರ್ಥ್ಯವನ್ನು ಏರಿಸುವ ಅವಶ್ಯಕತೆ ಇದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

    ಭಾರತದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು 2030 ರ ವೇಳೆಗೆ ಹೆಚ್ಚುವರಿಯಾಗಿ ದಿನಕ್ಕೆ 2 ಮಿಲಿಯನ್​ನಷ್ಟು ಬ್ಯಾರೆಲ್ಸ್​ ಪರ್​ ಡೇ(ಬಿಪಿಡಿ)​ಗಳ ಇಂಧನವನ್ನು ತೆಗೆಯುವ ಸಾಮರ್ಥ್ಯವನ್ನು ಸಾಧಿಸಬೇಕಿದೆ. ಜನರು ಇತರ ಪರಿಸರಸ್ನೇಹಿ ಇಂಧನಗಳ ಕಡೆಗೆ ವಾಲುತ್ತಿದ್ದರೂ ಪಳೆಯುಳಿಕೆ ಇಂಧನಗಳಿಗೆ(Fossil Fuels) ಮಹತ್ವದ ಪಾತ್ರವಿದೆ. ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಇಂಡಿಯನ್​ ಆಯಿಲ್​ ಕಾರ್ಪೊರೇಷನ್​(ಐಒಸಿ)ನ ಚೇರ್​ಮನ್​ ಎಸ್​.ಎಂ.ವೈದ್ಯ ಹೇಳಿದ್ದಾರೆ.

    ಇದನ್ನೂ ಓದಿ: ರಾತ್ರಿಯಾದ್ರೂ ಪಾರ್ಕ್​ನಲ್ಲೇ ಇದ್ದ ಜೋಡಿ, ಬುದ್ಧಿ ಹೇಳಿದ ಪೊಲೀಸ್​ಗೆ ಹೀಗಾ ಮಾಡ್ಹೋದು?

    ಅವರು ಸೋಮವಾರ ಪ್ಲಾಟ್ಸ್​ ಎಪಿಪಿಇಸಿ 2021 ಸಮ್ಮೇಳನದಲ್ಲಿ ಮಾತನಾಡುತ್ತಿದ್ದರು. ಜಗತ್ತಿನ ಮೂರನೇ ಅತಿದೊಡ್ಡ ತೈಲ ಗ್ರಾಹಕ ಹಾಗೂ ಆಮದುದಾರ ದೇಶವೆಂದರೆ ಭಾರತ. ಪ್ರಸ್ತುತ, ಭಾರತವು 5 ಮಿಲಿಯನ್​ ಬಿಪಿಡಿ ರೀಫೈನಿಂಗ್ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಮೂರನೇ ಒಂದು ಭಾಗವನ್ನು ಐಒಸಿ ನಿಯಂತ್ರಿಸುತ್ತದೆ.

    ಪರ್ಯಾಯ ಇಂಧನಗಳಿಗೆ ಇತ್ತೀಚೆಗೆ ಹೆಚ್ಚಿರುವ ಗಮನದ ಹಿನ್ನೆಲೆಯಲ್ಲಿ ಐಒಸಿ ಕೂಡ ಪರಿಸರಸ್ನೇಹಿ ಇಂಧನಗಳ ಉತ್ಪಾದನೆಯಲ್ಲಿ ಹೂಡಿಕೆ ಮಾಡುತ್ತಿದೆ. ಇನ್ನು ಎರಡರಿಂದ ಮೂರು ದಶಕಗಳಲ್ಲಿ ಪಳೆಯುಳಿಕೆ ಇಂಧನಗಳ ಬೇಡಿಕೆ ಕಡಿಮೆಯಾಗಬಹುದು. ಆದ್ದರಿಂದ ತನ್ನ ರೀಫೈನಿಂಗ್​ ವ್ಯವಹಾರಕ್ಕೆ ಧಕ್ಕೆ ಬಾರದಿರಲು ಪೆಟ್ರೋಕೆಮಿಕಲ್ಸ್​ ಮತ್ತು ಲೂಬ್ರಿಕೆಂಟ್​ಗಳ ಉತ್ಪಾದನೆಯನ್ನು ಐಒಸಿ ಹೆಚ್ಚಿಸುತ್ತಿದೆ ಎನ್ನಲಾಗಿದೆ.

    ಇದನ್ನೂ ಓದಿ: ಪ್ರತಿಭಟನೆಯಲ್ಲಿ ಮೋದಿಗೆ ‘ಧಿಕ್ಕಾರ’ ಎನ್ನುವ ಬದಲು ‘ಜೈಕಾರ’ ಕೂಗಿದ ಯುವಕರು! ಹೇ.. ಹೇ.. ಜೈ ಅನ್ನಬಾರದು…

    ಜೊತೆಗೇ, ಹಸಿರು ಇಂಧನಗಳಲ್ಲಿ ಕಂಪೆನಿ ಆಸಕ್ತಿ ತೋರಿದೆ. ದೆಹಲಿಯಲ್ಲಿ ಶೇ.18 ರಷ್ಟು ಹೈಡ್ರೋಜನ್​ ಸ್ಪೈಕಡ್​ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್​ (CNG) ಉತ್ಪಾದಿಸುವ ಘಟಕವನ್ನು ಸ್ಥಾಪಿಸಿರುವ ಐಒಸಿ, ದೇಶಾದ್ಯಂತ ಈ ತೆರನ ಅನೇಕ ಘಟಕಗಳನ್ನು ಸ್ಥಾಪಿಸುವ ಯೋಜನೆ ಹೊಂದಿದೆ ಎಂದು ವೈದ್ಯ ತಿಳಿಸಿದ್ದಾರೆ. (ಏಜೆನ್ಸೀಸ್)

    ಪ್ರತಿಭಟನೆ ವೇಳೆ ಎಡವಟ್ಟು: ಡಿಸಿಪಿ ಕಾಲಿನ ಮೇಲೆ ಹರಿದ ಕಾರು

    ಬಸ್ಸನ್ನು ಅಡ್ಡಗಟ್ಟಿದ ಒಂಟಿ ಸಲಗ… ಜೀವ ಕೈಯಲ್ಲಿ ಹಿಡಿದ ಪ್ರಯಾಣಿಕರು!

    ರಾಜಧಾನಿಗೆ ಭಾರತ್ ಬಂದ್​ ಬಿಸಿ: ದೆಹಲಿ ಗಡಿಗಳಲ್ಲಿ ವಾಹನಗಳ ಸಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts