"ಸೂರ್ಯವಂಶ" ನಟಿಯಿಂದ ನಾನು ದೂರವಾಗಿದ್ದೇನೆ: ಇಶಾ ಕೊಪ್ಪಿಕರ್ ಮಾಜಿ ಪತಿ

Timmy Narang
Published on

ಮುಂಬೈ: ನಟಿ ಇಶಾ ಕೊಪ್ಪಿಕರ್ ಅವರು ತಮ್ಮ ಪತಿ, ಹೋಟೆಲ್ ಉದ್ಯಮಿ ಟಿಮ್ಮಿ ನಾರಂಗ್ ಅವರಿಗೆ ವಿಚ್ಛೇದನ ನೀಡಿ ದೂರವಾಗಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಈಗ ಖಾಸಗಿವಾಹಿನಿ ಜತೆ ಮಾತನಾಡಿದ, ಟಿಮ್ಮಿ ನಾರಂಗ್ ಗಾಳಿ ಸುದ್ದಿಗೆ ಬ್ರೇಕ್​ ಹಾಕಿ ಸ್ಪಷ್ಟನೆ ನೀಡಿದ್ದಾರೆ.

ಟಿಮ್ಮಿ ನಾರಂಗ್ ಮಾತನಾಡಿ, "ಸುಮಾರು ಒಂದೂವರೆ ವರ್ಷಗಳ ನಂತರ ನಾವು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಕಳೆದ ವರ್ಷ ನವೆಂಬರ್‌ನಲ್ಲಿ ವಿಚ್ಛೇದನವನ್ನು ನೀಡಲಾಯಿತು. ಅದು ಸೌಹಾರ್ದಯುತ ಷರತ್ತುಗಳ ಮೇಲೆ ಇತ್ತು. ನಾವಿಬ್ಬರೂ ಈಗ ನಮ್ಮ ಜೀವನವನ್ನು ಬೇರೆ.. ಬೇರೆಯಾಗಿ ಮುಂದುವರಿಸಲು ಸ್ವತಂತ್ರರಾಗಿದ್ದೇವೆ. ಇದು ಸತ್ಯ. ಅದರ ಬಗ್ಗೆ ಗೊಂದಲ ಏಕೆ ಎಂದು ನನಗೆ ಕಾಣುತ್ತಿಲ್ಲ. ಇಶಾ, ಮಗಳು ರಿಯಾನ್ನಾಳೊಂದಿಗೆ ತನ್ನ ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಇಶಾ ಮತ್ತು ಟಿಮ್ಮಿ ಒಮ್ಮೆ ಜಿಮ್‌ನಲ್ಲಿ ಭೇಟಿಯಾದರು. ನಂತರ ಇಬ್ಬರೂ ಪ್ರೀತಿಸುತ್ತಿದ್ದರು. ಇಬ್ಬರೂ ಮೂರು ವರ್ಷಗಳಿಂದ ಪರಸ್ಪರ ತಿಳಿದಿದ್ದರು. ಇಶಾ ಮತ್ತು ಟಿಮ್ಮಿ ನವೆಂಬರ್ 2009 ರಲ್ಲಿ ವಿವಾಹವಾದರು. ಇಶಾ ಮತ್ತು ಟಿಮ್ಮಿ ಜುಲೈ 2014 ರಲ್ಲಿ ಮಗಳಿಗೆ ಜನ್ಮ ನೀಡಿದ್ದಾರೆ.

ಇಶಾ ಕೊಪ್ಪಿಕರ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅತ್ಯಂತ ಪಾರದರ್ಶಕವಾಗಿರುತ್ತಾರೆ. ಉದಾಹರಣೆಗೆ, ಸುಮಾರು ಎರಡು ವರ್ಷಗಳ ಹಿಂದೆ, ತಾರೆ ಕಾಸ್ಟಿಂಗ್ ಕೌಚ್‌ನೊಂದಿಗಿನ ತನ್ನ ಅನುಭವದ ಬಗ್ಗೆ ಕೂಡಾ ಮಾತನಾಡಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ , "ನಾನು ನಾಯಕನಿಗೆ ಕರೆ ಮಾಡಿದ್ದೇ, ಅವರು ನನ್ನನ್ನು ಒಬ್ಬಂಟಿಯಾಗಿ ಭೇಟಿಯಾಗಲು ಕೇಳಿದರು. ನನ್ನ ಸಿಬ್ಬಂದಿಯನ್ನು ಹೊರತುಪಡಿಸಿ ಅವರನ್ನು ಭೇಟಿ ಮಾಡಲು ಕೇಳಿದರು. ಅದರ ನಂತರ ಇಶಾ ಅವರು ನಿರ್ಮಾಪಕರಿಗೆ ಕರೆ ಮಾಡಿ, "ಪ್ರತಿಭೆ ಮತ್ತು ನೋಟದಿಂದಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ ಮತ್ತು ಅದು ನನಗೆ ಒಳ್ಳೆಯ ಕೆಲಸ ನೀಡಿದರೆ ಸಾಕು" ಎಂದು ಹೇಳಿದ್ದೆ ಎನ್ನುವ ಮೂಲಕವಾಗಿ ಸುದ್ದಿಯಾಗಿದ್ದರು.

ಇಶಾ ಬಾಲಿವುಡ್‌ನಲ್ಲಿ ಕೆಲಸ ಮಾಡಿದ್ದಾರೆ. ತಮಿಳು, ತೆಲುಗು, ಕನ್ನಡ ಮತ್ತು ಮರಾಠಿ ಚಲನಚಿತ್ರ ಉದ್ಯಮಗಳ ಭಾಗವಾಗಿದ್ದರು. 2000 ರಲ್ಲಿ 'ಫಿಜಾ' ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ಅವರು ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕನ್ನಡದಲ್ಲಿ ಸೂರ್ಯವಂಶ, ಓ ನನ್ನ ನಲ್ಲೆ, ಲೂಟಿ, ಕವಚ ಸಿನಿಮಾಗಳಲ್ಲಿ ಇಶಾ ಬಣ್ಣ ಹಚ್ಚಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net