

Supreme Court: ಜೆಎನ್ಯುನ ಮಾಜಿ ಪ್ರಾಧ್ಯಾಪಕಿ ಅಮಿತಾ ಸಿಂಗ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಸುದ್ದಿ ಪೋರ್ಟಲ್ ದಿ ವೈರ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಸೋಮವಾರ (ಸೆಪ್ಟೆಂಬರ್,22) ಒಪ್ಪಿಕೊಂಡಿದೆ. ಅಲ್ಲದೆ, ವಸಾಹತುಶಾಹಿ ಯುಗದ ಕ್ರಿಮಿನಲ್ ಮಾನನಷ್ಟ ಕಾನೂನುಗಳ ಕುರಿತು ಹೊಸ ಚರ್ಚೆಗೆ ಸುಪ್ರೀಂ ನಾಂದಿ ಹಾಡಿದೆ.
ಈ ವಿಚಾರಣೆಯ ಸಮಯದಲ್ಲಿ, ನ್ಯಾಯಮೂರ್ತಿ ಎಂ.ಎಂ. ಸುಂದ್ರೇಶ್ ಮತ್ತು ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಪೀಠವು, ಮಾನನಷ್ಟ ಕಾನೂನನ್ನು ಅಪರಾಧ ಮುಕ್ತಗೊಳಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ನಂತರ ಇದೆಲ್ಲವನ್ನೂ ಅಪರಾಧ ಮುಕ್ತಗೊಳಿಸುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ ಎಂದು ನ್ಯಾಯಮೂರ್ತಿ ಸುಂದ್ರೇಶ್ ಹೇಳಿದ್ದು, ಈ ವಿಷಯದ ಬಗ್ಗೆ ನೋಟಿಸ್ ನೀಡಲು ಒಪ್ಪಿಕೊಂಡಿದ್ದಾರೆ.
ದಿ ವೈರ್ ಮತ್ತು ಉಪ ಸಂಪಾದಕ ಅಜಯ್ ಆಶೀರ್ವಾದ್ ಮಹಾಪ್ರಸ್ಥ ವಿರುದ್ಧದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಈ ವಿಷಯವಾಗಿ ದಿ ವೈರ್ ಪ್ರಕಟಿಸಿದ 2016 ರ ಲೇಖನದಿಂದ ಈ ಪ್ರಕರಣ ಬಂದಿದ್ದು, ಜೆಎನ್ಯು ವಿಶ್ವವಿದ್ಯಾಲಯ ಸಂಘಟಿತ ಲೈಂಗಿಕ ದರೋಡೆಯ ಸ್ಥಳ ಎಂದು ಕರೆದ ದಾಖಲೆಯು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ವಿರುದ್ಧದ ದ್ವೇಷ ಅಭಿಯಾನ ಎಂದು ಆರೋಪ ಮಾಡಿದ್ದವು.
ಅಲ್ಲದೆ, ಅಜಯ್ ಆಶೀರ್ವಾದ್ ಮಹಾಪ್ರಸ್ಥ ಬರೆದಿರುವ ಲೇಖನವು, ವಿವಾದಾತ್ಮಕ ಕಡತವನ್ನು ಬರೆದಿದ್ದಾರೆ ಎಂದು ಸುಳ್ಳು ಸೂಚಿಸುತ್ತದೆ. ಆದರೆ, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿರುದ್ಧ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಜೆಎನ್ಯು ಮಾಜಿ ಪ್ರಾಧ್ಯಾಪಕ ಸಿಂಗ್ ಆರೋಪಿಸಿದ್ದಾರೆ.
ಈ ವಿಷಯವಾಗಿ ದೂರಿನಲ್ಲಿ ಸಂಪಾದಕರು ದಾಖಲೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲಿಲ್ಲ.ಇದನ್ನು ತಮ್ಮ ಪತ್ರಿಕೆಗೆ ಆರ್ಥಿಕವಾಗಿ ಲಾಭ ತಂದುಕೊಡಲು ಬಳಸಿಕೊಂಡು ಸಿಂಗ್ರ ಖ್ಯಾತಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಹಿರಿಯ ವಕೀಲ ಕಪಿಲ್ ಸಿಬಲ್ ಪ್ರತಿನಿಧಿಸುತ್ತಿರುವ ಅರ್ಜಿದಾರರು, ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ ( ದಿ ವೈರ್ ಅನ್ನು ನಡೆಸುವ ಟ್ರಸ್ಟ್) ಸೇರಿದಂತೆ , ದೆಹಲಿ ನ್ಯಾಯಾಲಯವು ಹೊರಡಿಸಿದ ಹೊಸ ಸಮನ್ಸ್ ಅನ್ನು ಪ್ರಶ್ನಿಸುತ್ತಿದ್ದಾರೆ.
ದಿ ವೈರ್ ನ ಸಿದ್ಧಾರ್ಥ್ ಭಾಟಿಯಾ ಮತ್ತು ಅಜೋಯ್ ವಿರುದ್ಧ ದೆಹಲಿ ಮೆಟ್ರೋಪಾಲಿಟನ್ ನ್ಯಾಯಾಲಯವು 2017 ರಲ್ಲಿ ಸಮನ್ಸ್ ಜಾರಿ ಮಾಡಿತ್ತು. ದೆಹಲಿ ಹೈಕೋರ್ಟ್ 2023ರಲ್ಲಿ ಸಮನ್ಸ್ಗಳನ್ನು ರದ್ದುಗೊಳಿಸಿತ್ತು. ಆದರೆ, ಸುಪ್ರೀಂ ಕೋರ್ಟ್ 2024 ರಲ್ಲಿ ಆ ನಿರ್ಧಾರವನ್ನು ರದ್ದುಗೊಳಿಸಿ ಪ್ರಕರಣವನ್ನು ಹೊಸದಾಗಿ ಪರಿಗಣಿಸಲು ಮರುನಿರ್ದೇಶಿಸಿತು. ಈಗ ಪ್ರಶ್ನಿಸಲಾಗುತ್ತಿರುವ ಎರಡನೇ ಸುತ್ತಿನ ಸಮನ್ಸ್ ಅನ್ನು ದೆಹಲಿ ಹೈಕೋರ್ಟ್ ಮೇ 2025 ರಲ್ಲಿ ಎತ್ತಿಹಿಡಿಯಿತು. (ಏಜೆನ್ಸೀಸ್)