ಟ್ರಂಪ್ ಸುಂಕಗಳಿಗೆ ಭಾರತ ತಕ್ಷಣ ಏಕೆ ಪ್ರತಿಕ್ರಿಯಿಸಲಿಲ್ಲ? ರಕ್ಷಣಾ ಸಚಿವ ಹೇಳಿದ್ದೇನೆ..! Trump's tariffs

Rajnath Singh
Published on

Trump's tariffs: ಡೊನಾಲ್ಡ್ ಟ್ರಂಪ್ ಹೇರಿರುವ ಶೇ,50 ಸುಂಕಕ್ಕೆ ಭಾರತ ಪ್ರತಿಕ್ರಿಯಿಸಲಿಲ್ಲ. ಏಕೆಂದರೆ, ಭಾರತವು ವಿಶಾಲ ಮನಸ್ಸಿನ ವಿಧಾನವನ್ನು ಹೊಂದಿದೆ. ದೊಡ್ಡ ಹೃದಯ ಹೊಂದಿರುವವರು ಯಾವುದಕ್ಕೂ ತಕ್ಷಣ ಪ್ರತಿಕ್ರಿಯಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ಬಗ್ಗೆ ಭಾರತೀಯ ಸಮುದಾಯದೊಂದಿಗೆ ಮಾತನಾಡಿದ ಸಿಂಗ್​, ಅಮೆರಿಕದ ಸುಂಕಗಳಿಗೆ ನಾವು ಪ್ರತಿಕ್ರಿಯಿಸಲಿಲ್ಲ. ವಿಶಾಲ ಮನಸ್ಸಿನವರು ಮತ್ತು ದೊಡ್ಡ ಹೃದಯದವರು ಯಾವುದಕ್ಕೂ ತಕ್ಷಣ ಪ್ರತಿಕ್ರಿಯಿಸುವುದಿಲ್ಲ ಎಂದು ಮೊರಾಕೊದಲ್ಲಿ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಪಿಒಕೆ ಜನರು ಪ್ರಸ್ತುತ ಆಡಳಿತದಿಂದ ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ಯಾವುದೇ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳದೆ ಭಾರತವು ಅದರ ಮೇಲೆ ಹಿಡಿತ ಸಾಧಿಸುವ ವಿಶ್ವಾಸವನ್ನು ರಾಜ್​ನಾಥ್​ ವ್ಯಕ್ತಪಡಿಸಿದ್ದಾರೆ. ಪಿಒಕೆ ತನ್ನದೇ ಆದ ಮೇಲೆ ನಮ್ಮದಾಗಲಿದೆ. ಪಿಒಕೆಯಲ್ಲಿ ಬೇಡಿಕೆಗಳು ಕೇಳಿಬರುತ್ತಿವೆ, ನೀವು ಘೋಷಣೆಗಳನ್ನು ಕೇಳಿರಬೇಕು ಎಂದು ಮೊರಾಕೊದಲ್ಲಿ ಭಾರತೀಯ ಸಮುದಾಯದೊಂದಿಗೆ ಸಂವಾದದ ಸಂದರ್ಭದಲ್ಲಿ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಸಿಂಗ್​​​​​, ಐದು ವರ್ಷಗಳ ಹಿಂದೆ ಕಾಶ್ಮೀರ ಕಣಿವೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾನು ಭಾರತೀಯ ಸೇನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ, ಆಗ ನಾನು ಹೇಳಿದ್ದೆ ನಾವು ಪಿಒಕೆ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ, ಅದು ಹೇಗೂ ನಮ್ಮದು ಎಂದು ತಿಳಿಸಿದ್ದೆ ಎಂದಿದ್ದಾರೆ.

ಆಫ್ರಿಕಾದಲ್ಲಿ ಭಾರತದ ಮೊದಲ ರಕ್ಷಣಾ ಉತ್ಪಾದನಾ ಘಟಕವಾದ ಬೆರ್ರೆಚಿಡ್‌ನಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್‌ನ ವೀಲ್ಡ್ ಆರ್ಮರ್ಡ್ ಪ್ಲಾಟ್‌ಫಾರ್ಮ್ (WhAP) 8x8 ಗಾಗಿ ಹೊಸ ಉತ್ಪಾದನಾ ಘಟಕವನ್ನು ಸಿಂಗ್​ ಉದ್ಘಾಟಿಸಲಿದ್ದಾರೆ. ಅಲ್ಲದೆ, ಮೊರಾಕೊದಲ್ಲಿನ ಹೊಸ ಸೌಲಭ್ಯವು ಭಾರತದ ರಕ್ಷಣಾ ಉದ್ಯಮದ ಬೆಳೆಯುತ್ತಿರುವ ಜಾಗತಿಕ ಹೆಜ್ಜೆ ಗುರುತನ್ನು ಪ್ರತಿಬಿಂಬಿಸುವ ಪ್ರಮುಖ ಮೈಲಿಗಲ್ಲು ಎಂದು ಸಿಂಗ್​ ಬಣ್ಣಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net