

ಬೆಂಗಳೂರು: ಟಿಕ್ಟಾಕ್, ಪಬ್ಜಿ ಸೇರಿ ಚೀನಾದ ಒಟ್ಟು 59 ಆ್ಯಪ್ಗಳನ್ನು ಭಾರತದಲ್ಲಿ ನಿರ್ಬಂಧಿಸಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿರುವುದೇ. ಅದರಲ್ಲಿ ಪಬ್ಜಿ ಹೊಸ ಅವತಾರದೊಂದಿಗೆ ಭಾರತಕ್ಕೆ ವಾಪಸಾಗಿರುವುದೂ ಹಳೆಯ ವಿಚಾರವೇ. ಇದೀಗ ಹೊಸ ವಿಚಾರವೇನೆಂದರೆ, ಪಬ್ಜಿಯಂತೆ ಟಿಕ್ಟಾಕ್ ಕೂಡ ಭಾರತಕ್ಕೆ ವಾಪಸಾಗಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು.
ಟಿಕ್ಟಾಕ್(TikTok) ಆ್ಯಪ್ನ್ನು ಚೀನಾದ ಬೈಟ್ಡ್ಯಾನ್ಸ್ ಸಂಸ್ಥೆ ತಯಾರಿಸಿತ್ತು. ಆ ಹೆಸರಿಗೆ ಈಗಾಗಲೇ ಟ್ರೇಡ್ ಮಾರ್ಕ್ ಪಡೆದಿರುವ ಸಂಸ್ಥೆ ಇದೀಗ TikTock ಹೆಸರಿಗೆ ಟ್ರೇಡ್ ಮಾರ್ಕ್ ಪಡೆಯಲು ಮುಂದಾಗಿದೆ. ಭಾರತದ ಐಟಿ ಇಲಾಖೆಯ ಎಲ್ಲ ನಿಯಮಗಳಿಗೆ ಒಪ್ಪಿಕೊಳ್ಳುವುದಾಗಿ ಸಂಸ್ಥೆ ಈ ಹಿಂದೆಯೇ ತಿಳಿಸಿದೆ. ಅದರ ಬೆನ್ನಲ್ಲೇ ಈ ರೀತಿ ಟ್ರೇಡ್ ಮಾರ್ಕ್ಗಾಗಿ ಅರ್ಜಿ ಹಾಕಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಜುಲೈ 6ನೇ ತಾರೀಖಿನಂದು ಟ್ರೇಡ್ ಮಾರ್ಕ್ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸದ್ಯ ಇನ್ನೂ ಅರ್ಜಿ ಪರಿಶೀಲನೆ ಹಂತದಲ್ಲಿದೆ. ಟ್ರೇಡ್ ಮಾರ್ಕ್ ಸಿಕ್ಕ ಮೇಲೆ ಭಾರತಕ್ಕೆ ಹೊಂದುವ ರೀತಿಯಲ್ಲಿ ನಿಯಮಗಳನ್ನು ಮಾಡಿಕೊಂಡು ಟಿಕ್ಟಾಕ್ ಮತ್ತೆ ವಾಪಸು ಬರಬಹುದು ಎನ್ನುವ ಚರ್ಚೆ ಭಲವಾಗಿದೆ. (ಏಜೆನ್ಸೀಸ್)