ಟೈಗರ್​-ದಿಶಾ ಕಾರನ್ನು ಪೊಲೀಸರು ತಡೆದಿದ್ದೇಕೆ?

Tiger Shroff - Disha Patani - Final
Published on

ಮುಂಬೈ: ಟೈಗರ್​ ಶ್ರಾಫ್ ಮತ್ತು ದಿಶಾ ಪಠಾಣಿ ಜತೆಯಾಗಿ ಚಿತ್ರಗಳನ್ನು ಮಾಡಿದ್ದು ಎರಡೇ ಇರಬಹುದು. ಆದರೆ, ಅವರಿಬ್ಬರ ಸ್ನೇಹ ಮಾತ್ರ ಗಾಢ. ಇಬ್ಬರೂ ಸದಾ ಜತೆಯಾಗಿಯೇ ಇರುತ್ತಾರೆ, ಹಾಲಿಡೇಗೆ ಹೋಗುತ್ತಾರೆ, ಒಬ್ಬರನ್ನೊಬ್ಬರು ಬಿಟ್ಟಿರದಂತೆ ಯಾವಾಗಲೂ ಕೈಹಿಡಿದುಕೊಂಡೇ ಇರುತ್ತಾರೆ. ಅವರಿಬ್ಬರ ಸ್ನೇಹವನ್ನು ನೋಡಿದ ಮಂದಿ, ಅವರಿಬ್ಬರೂ ಮುಂದೊಂದು ದಿನ ಮದುವೆಯಾಗೋದು ಗ್ಯಾರಂಟಿ, ಸಂಸಾರ ಮಾಡೋದು ಸೆಂಟ್​ ಪರ್ಸೆಂಟ್​ ಗ್ಯಾರಂಟಿ ಎನ್ನುತ್ತಿದ್ದಾರೆ.

ಈಗ್ಯಾಕೆ ಈ ಮಾತು ಎಂದರೆ, ಟೈಗರ್​ ಮತ್ತು ದಿಶಾ ಮಂಗಳವಾರ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರ ಕಾರನ್ನು ಪೊಲೀಸರು ತಡೆದಿದ್ದಾರೆ. ಲಾಕ್​ಡೌನ್​ ಇರುವಾಗ ಈ ಜೋಡಿ, ಎಲ್ಲಾದರೂ ಜಾಲಿರೈಡ್​ ಹೊರಟುಬಿಟ್ಟಿತಾ ಎಂಬ ಪ್ರಶ್ನೆ ಸಹವೇ?

ವಿಷಯವೇನೆಂದರೆ, ಟೈಗರ್​ ಮತ್ತು ದಿಶಾ ಜಿಮ್​ಗೆ ಹೋಗಿದ್ದಾರೆ. ವಾಪಸ್ಸು ಬರುವಾಗ, ಯಾವುದೋ ಒಂದು ರಸ್ತೆಗೆ ಎಂಟ್ರಿ ಕೊಟ್ಟಿದ್ದಾರೆ. ಆ ರಸ್ತೆಯ ಇನ್ನೊಂದು ತುದಿಯಲ್ಲಿ ಕೆಲಸ ನಡೆಯುತ್ತಿದ್ದಿರಂದ, ಬ್ಲಾಕ್​ ಮಾಡಲಾಗಿತ್ತಂತೆ. ಇದು ಗೊತ್ತಿರದ ಟೈಗರ್​, ಅದೇ ದಾರಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಕೊನೆಗೆ ಪೊಲೀಸರು ಅವರನ್ನು ತಡೆದು ವಾಪಸ್ಸು ಕಳಿಸಿದ್ದಾರೆ. ಇನ್ನೊಂದು ಮಾರ್ಗವಾಗಿ ಹೋಗುವುದಕ್ಕೆ ಹೇಳಿ ಕಳುಹಿಸಿದ್ದಾರೆ. ಬೇರೆ ದಾರಿ ಇಲ್ಲದೆ ಟೈಗರ್​, ಸುತ್ತಿ ಬಳಸಿ ಇನ್ನೊಂದು ದಾರಿಯಲ್ಲಿ ಮನೆಗೆ ತಲುಪಿದ್ದಾರೆ.

ಅಂದಹಾಗೆ, 'ಹೀರೋಪಂತಿ 2' ಎಂಬ ಚಿತ್ರದಲ್ಲಿ ಟೈಗರ್​ ನಟಿಸುತ್ತಿದ್ದು, ಈಗಾಗಲೇ ಅರ್ಧ ಚಿತ್ರೀಕರಣ ಮುಗಿದಿದೆ. ಇದಲ್ಲದೆ, 'ಗಣಪತ್​ 1' ಎಂಬ ಇನ್ನೊಂದು ಚಿತ್ರವನ್ನೂ ಟೈಗರ್​ ಒಪ್ಪಿಕೊಂಡಿದ್ದು, ಇನ್ನಷ್ಟೇ ಚಿತ್ರೀಕರಣ ಪ್ರಾರಂಭವಾಗಬೇಕಿದೆ. ಇನ್ನು, 'ಏಕ್​ ವಿಲನ್​ ರಿಟರ್ನ್ಸ್​' ಎಂಬ ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net