More

    ಬಿಗ್​ಬಾಸ್​, ಗಿಚ್ಚಿ ಗಿಲಿಗಿಲಿ ಸ್ಪರ್ಧಿ ತುಕಾಲಿ ಸಂತೋಷ್​ ಕಾರು ಅಪಘಾತ; ಓರ್ವನಿಗೆ ಗಾಯ

    ತುಮಕೂರು: ಬಿಗ್​ಬಾಸ್​, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಹಾಸ್ಯನಟ ತುಕಾಲಿ ಸಂತೋಷ್​ ಅವರು ಪ್ರಯಾಣಿಸುತ್ತಿದ್ದ ಅಪಘಾತಕ್ಕೀಡಾಗಿದೆ. ತುಮಕೂರು ಜಿಲ್ಲೆ ಕುಣಿಗಲ್​ ತಾಲ್ಲೂಕಿನ ಹೊನ್ನೇನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಆಟೋ ಚಾಲಕ ಗಾಯಗೊಂಡಿದ್ದಾನೆ.

    ಕೆಲ ವಾರಗಳ ಹಿಂದಷ್ಟೇ ಹೊಸ ಕಿಯಾ ಸೆಲ್ಟೋಸ್​ ಕಾರನ್ನು ತುಕಾಲಿ ಸಂತೋಷ್​ ಖರೀದಿ ಮಾಡಿದ್ದರು. ಹೊಸ ಕಾರು ಮನೆಗೆ ಬಂದು ಎರಡು ವಾರ ಕಳೆಯುವಷ್ಟರಲ್ಲೇ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

    ಕುಣಿಗಲ್​ ಮಾರ್ಗ್ವಾಗಿ ತುಕಾಲಿ ಸಂತೋಷ್​ ದಂಪತಿ ಹಾಸನ ಜಿಲ್ಲೆ ಹೊಳೆನರಸೀಪುರದತ್ತ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಕುಣಿಗಲ್​​ ಕಡೆಯಿಂದ ಕುರುಡಿಹಳ್ಳಿಗೆ ಆಟೋ ಒಂದು ಬರುತ್ತಿದ್ದ ತುಕಾಲಿ ಸಂತೋಷ್​ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಗಾಯಗೊಂಡಿದ್ದು, ಆತನನ್ನು ಜಗದೀಶ್​ ಎಂದು ಗುರುತಿಸಲಾಗಿದೆ. ಪ್ರಸ್ತುತ ಆತನನ್ನು ಕುಣಿಗಲ್​ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಣಿಗಲ್​ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Thukali Car Accident

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts