More

    ಸಾಕಷ್ಟು ಅಚ್ಚರಿಯಿಂದ ಕೂಡಿದ ಬಿಜೆಪಿಯ ಎರಡನೇ ಪಟ್ಟಿ; ರಾಜ್ಯದ ಹಲವು ಸಂಸದರಿಗೆ ಟಿಕೆಟ್ ಮಿಸ್

    ನವದೆಹಲಿ: ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಈ ನಡುವೆ ಬಿಜೆಪಿ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಬಿಜೆಪಿ ನಾಯಕರು 72 ಅಭ್ಯರ್ಥಿಗಳಿರುವ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕ 20 ಅಭ್ಯರ್ಥಿಗಳು ಒಳಗೊಂಡಿದ್ದಾರೆ.

    ನಿರೀಕ್ಷೆಯಂತೆ ಕೆಲವು ಹಾಲಿ ಸಂಸದರಿಗೆ ಕೊಕ್​ ನೀಡಲಾಗಿದ್ದು, ಕೊಪ್ಪಳ, ಬಳ್ಳಾರಿ, ಹಾವೇರಿ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಉಡುಪಿ-ಚಿಕ್ಕಮಗಳೂರು, ತುಮಕೂರು, ಮೈಸೂರು ಹಾಗೂ ಚಾಮರಾಜನಗರದಲ್ಲಿ ಹಾಲಿ ಸಂಸದರಿಗೆ ಕೊಕ್​ ನೀಡಲಾಗಿದ್ದು, ಹೊಸ ಮುಖ ಹಾಗೂ ರಾಜ್ಯ ಘಟಕದ ಹಿರಿಯ ನಾಯಕರಿಗೆ ಮಣೆ ಹಾಕಲಾಗಿದೆ.

    ಕರ್ನಾಟಕದ 20 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟ

    • ಚಿಕ್ಕೋಡಿ: ಅಣ್ಣಾ ಸಾಹೇಬ್​ ಶಂಕರ್​ ಜೊಲ್ಲೆ
    • ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್
    • ಬಿಜಾಪುರ (ಎಸ್​ಸಿ): ರಮೇಶ್​ ಜಿಗಜಿಣಗಿ
    • ಕಲಬುರಗಿ (ಎಸ್​ಸಿ): ಡಾ. ಉಮೇಶ್​ ಜಾಧವ್​
    • ಬೀದರ್​: ಭಗವಂತ್ ಖೂಬಾ
    • ಕೊಪ್ಪಳ: ಡಾ. ಬಸವರಾಜ್​ ಕ್ಯಾವತೋರ್
    • ಬಳ್ಳಾರಿ: ಬಿ. ಶ್ರೀರಾಮುಲು
    • ಹಾವೇರಿ: ಬಸವರಾಜ ಬೊಮ್ಮಾಯಿ
    • ಧಾರವಾಡ: ಪ್ರಲ್ಹಾದ್​ ಜೋಶಿ
    • ದಾವಣಗೆರೆ: ಗಾಯತ್ರಿ ಸಿದ್ದೇಶ್ವರ
    • ಶಿವಮೊಗ್ಗ: ಬಿ.ವೈ. ರಾಘವೇಂದ್ರ
    • ಉಡುಪಿ-ಚಿಕ್ಕಮಗಳೂರು: ಕೋಟಾ ಶ್ರೀನಿವಾಸ ಪೂಜಾರಿ
    • ದಕ್ಷಿಣ ಕನ್ನಡ: ಕ್ಯಾಪ್ಟನ್​ ಬ್ರಿಜೇಶ್​ ಚೌಟಾ
    • ತುಮಕೂರು: ವಿ. ಸೋಮಣ್ಣ
    • ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​
    • ಚಾಮರಾಜನಗರ: ಬಿ. ಬಾಲರಾಜ್
    • ಬೆಂಗಳೂರು ಗ್ರಾಮಾಂತರ: ಡಾ.ಸಿ.ಎನ್. ಮಂಜುನಾಥ್
    • ಬೆಂಗಳೂರು ಕೇಂದ್ರ: ಪಿ.ಸಿ. ಮೋಹನ್
    • ಬೆಂಗಳೂರು ಉತ್ತರ: ಕುಮಾರಿ ಶೋಭಾ ಕರಂದ್ಲಾಜೆ
    • ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts