

Vastu tips: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬಂತು. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಈ ಸಂದರ್ಭದಲ್ಲಿ ಬೇಡವಾದ ವಸ್ತುಗಳನ್ನು ಹೊರಗೆ ಹಾಕಲಾಗುತ್ತದೆ. ಇದು ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಪ್ರತಿಯೊಬ್ಬರೂ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಮನೆಯಲ್ಲೇನಾದರೂ, ಈ ವಸ್ತುಗಳಿದ್ದರೆ, ತಕ್ಷಣವೇ ಅದನ್ನು ತೆಗೆದುಹಾಕಬೇಕು.
ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳು ಮನೆಯಲ್ಲಿದ್ದರೆ ಅವು ನಿಮ್ಮ ಸಂತೋಷವನ್ನು ಕಿತ್ತುಕೊಂಡು ನಿಮ್ಮ ಮೇಲೆ ನಕರಾತ್ಮಕ ಪರಿಣಾಮವನ್ನು ಬೀರುವಂತೆ ಮಾಡುತ್ತವೆ. ಇದರಿಂದ ನಿಮ್ಮ ಮನೆ ಬಾಗಿಲಿಗೆ ಬಂದ ಲಕ್ಷ್ಮೀ ವಾಪಾಸ್ಸಾಗುತ್ತಾಳೆ. ಹಾಗಾಗಿ ನಿಮಗೇನಾದರು ಸುಖ, ಶಾಂತಿ ನೆಮ್ಮದಿ ಬೇಕೆಂದರೆ ಈ ಕೆಳಗೆ ಸೂಚಿಸಿದ ವಸ್ತುಗಳನ್ನು ನೀವು ಮೊದಲು ಮನೆಯಿಂದ ಹೊರಹಾಕಿ. ಹಾಗಿದ್ದರೆ, ಯಾವುದು ಎಂದು ನೋಡೋಣ ಬನ್ನಿ .........
ಮನೆಯಲ್ಲಿ ಒಡೆದ ಗಾಜು, ಕನ್ನಡಿ ಇಟ್ಟುಕೊಳ್ಳುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಇಂತಹ ಕನ್ನಡಿಗಳು ಮನೆಯಲ್ಲಿದ್ದರೆ ನಿಮ್ಮ ಕುಟುಂಬಗಳಲ್ಲಿ ಜಗಳಗಳು ಪ್ರಾರಂಭವಾಗುತ್ತವೆ. ಸಣ್ಣ ಪುಟ್ಟ ಕಾರಣಗಳಿಂದ ವಾದ ವಿವಾದ ಉಲ್ಬಣಗೊಳ್ಳುತ್ತವೆ. ಇದರಿಂದ ಮನೆಯಲ್ಲಿ ಅಶಾಂತಿ ಉಂಟಾಗುತ್ತದೆ. ಆದರಿಂದ ನಿಮ್ಮ ಮನೆಯಲ್ಲೇನಾದರು ಒಡೆದ ಕನ್ನಡಿ ಇದ್ದರೆ ಇಂದೇ ಹೊರಹಾಕಿ.
ಪ್ರತಿಯೊಬ್ಬರ ಮನೆಯಲ್ಲೂ ಗಡಿಯಾರ ಇರುತ್ತದೆ. ಇದು ಸಮಯವನ್ನು ತಿಳಿಸುತ್ತದೆ. ಮನೆಯಲ್ಲಿ ಏನಾದರು ಮುರಿದ ಗಡಿಯಾರ ಅಥವಾ ಹಾಳಾದ ಗಡಿಯಾರ ಇದ್ದರೆ ಇದು ಪ್ರಗತಿಯ ಹಾದಿಯನ್ನು ತಪ್ಪಿಸುವಂತೆ ಮಾಡುತ್ತದೆ. ಇದರಿಂದ ಯಾವುದೇ ಕೆಲಸ ಕೈಗೊಂಡರೂ ಪೂರ್ಣವಾಗುವುದಿಲ್ಲ. ಯಾವುದೇ ಯಶಸ್ಸು ಫಲಿಸುವುದಿಲ್ಲ. ಆದರಿಂದ ನೀವು ಈ ರೀತಿಯ ಗಡಿಯಾರವನ್ನು ಮನೆಯಲ್ಲಿಟ್ಟುಕೊಳ್ಳಬೇಡಿ..
ಇಂದಿನ ಜನರಿಗೆ ಚಪ್ಪಲಿ ಶೂಗಳನ್ನು ಕಲೆಕ್ಸನ್ ಮಾಡುವುದು ಒಂದು ರೀತಿಯ ಹವ್ಯಾಸವಾಗಿ ಮಾರ್ಪಟ್ಟಿದೆ. ಆದರೆ ಈ ರೀತಿಯ ಹರಿದ ಅಥವಾ ಹಳೆಯ ಪಾದರಕ್ಷೆಗಳನ್ನು ಇಟ್ಟುಕೊಳ್ಳುವುದರಿಂದ ಇದು ನಿಮ್ಮ ಮನೆಯಲ್ಲಿ ನಕರಾತ್ಮಕ ಪರಿಣಾಮ ಬೀರುವಂತೆ ಮಾಡುತ್ತದೆ. ಹಾಗೆಯೇ ನಿಮ್ಮ ಮನೆಗೆ ಲಕ್ಷ್ಮೀ ದೇವಿಯ ಆಗಮನವು ಆಗುವುದಿಲ್ಲ. ಹಾಗಾಗಿ ಸಕರಾತ್ಮಕ ಪರಿಣಾಮ ನಿಮ್ಮ ಮನೆಗೆ ಬೇಕೆಂದರೆ ನೀವು ಇವತ್ತೇ ನಿಮ್ಮ ಹಳೆಯ ಪಾದರಕ್ಷೆಗಳನ್ನು ಹೊರಗೆ ಹಾಕಿ..
ಕೆಲವೊಮ್ಮೆ ಮನೆಯಲ್ಲಿರುವ ದೇವರ ಮೂರ್ತಿಗಳ ಮೇಲೆ ನೀರು ಬಿದ್ದು, ಅವು ಹಾಳಾಗಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಈ ರೀತಿಯ ಮೂರ್ತಿಗಳನ್ನು ಇಡುವುದರಿಂದ ಇವು ನಿಮ್ಮ ಮನೆಗೆ ನಕರಾತ್ಮಕ ಪರಿಣಾಮ ಹೆಚ್ಚಾಗಿ ಯಾವುದೇ ದೇವರುಗಳಿಂದ ಆಶೀರ್ವಾದ ದೊರೆಯುವುದಿಲ್ಲ. ಹಾಗಾಗಿ ತಕ್ಷಣವೇ ಅವುಗಳನ್ನು ನೀರಿನಲ್ಲಿ ಮುಳುಗಿಸಿ.
ವಾಸ್ತು ಶಾಸ್ತ್ರದ ಪ್ರಕಾರ, ಹಳೆಯ ಸ್ಕ್ರ್ಯಾಪ್ ಪತ್ರಿಕೆಗಳು, ಬಿಲ್ಗಳನ್ನು ಮನೆಯಲ್ಲಿ ಇಡಬೇಡಿ. ಇವು ವಾಸ್ತು ದೋಷಗಳನ್ನು ಉಂಟುಮಾಡುತ್ತವೆ. ಹಾಗಾಗಿ ಹಳೆಯ ರಶೀದಿ, ಪೇಪರ್ ಬಿಲ್ಗಳನ್ನು ಬಿಸಾಕಿ ಇಲ್ಲದಿದ್ದರೆ ಇವು ನಿಮ್ಮ ಮನೆಯಲ್ಲಿ ಸಂಪತ್ತು ವೃದ್ಧಿಸಲು ಸಹಾಯ ಮಾಡುವುದಿಲ್ಲ.
ಸಾಮಾನ್ಯವಾಗಿ, ಹಳೆಯ ಕಬ್ಬಿಣದ ವಸ್ತುಗಳು ಮನೆಯ ಛಾವಣಿಯ ಮೇಲೆ ಅಥವಾ ಅಂಗಡಿ ಕೋಣೆಯಲ್ಲಿ ಬಿದ್ದಿರುತ್ತವೆ. ಇವುಗಳನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ನಿಮ್ಮ ಜೀವನದಲ್ಲಿ ಶನಿಯ ಆಗಮನ ಆಗುತ್ತದೆ. ಆದರಿಂದ ತುಕ್ಕು ಹಿಡಿದ ಕಬ್ಬಿಣಗಳಿದ್ದರೆ ಇಂದೇ ಬಿಸಾಕಿ ಇದು ನಿಮ್ಮ ಜೀವನದಲ್ಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಅನೇಕರು ಅಲಂಕಾರಕ್ಕಾಗಿ ತಮ್ಮ ಮನೆಯಲ್ಲಿ ಹಲವಾರು ರೀತಿಯ ಗಿಡಗಳನ್ನು ನೆಡುತ್ತಾರೆ. ಈ ಸಸ್ಯಗಳು ಒಣಗಿ ಎಲ್ಲಾ ಎಲೆಗಳು ಉದುರುತ್ತವೆ. ಇಂತಹ ಸಸ್ಯಗಳು ನಿಮ್ಮ ಮನೆಯಲ್ಲಿದ್ದರೆ ಅವುಗಳನ್ನು ಈಗಲೇ ಮನೆಯಿಂದ ಹೊರಹಾಕಿ ಇಲ್ಲದಿದ್ದರೆ, ಇದು ಕುಟುಂಬದಲ್ಲಿ ನಕರಾತ್ಮಕ ಪ್ರಭಾವ ಬೀರುವಂತೆ ಮಾಡುತ್ತದೆ. ಹಾಗಾಗಿ ಯಾವಾಗಲೂ ಹಸಿರು ಮತ್ತು ಹೂಬಿಡುವ ಸಸ್ಯಗಳನ್ನು ಇಟ್ಟುಕೊಳ್ಳಬೇಕು. (ಏಜೆನ್ಸೀಸ್)