Custodial Death| ಆರೋಪಿಗೆ ಚಿತ್ರಹಿಂಸೆ ನೀಡಿದ ಪೊಲೀಸರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ ನ್ಯಾಯಾಲಯ

court
Published on

Custodial Death: ಸೆಪ್ಟೆಂಬರ್​ 2009 ರಲ್ಲಿ ಆರೋಪಿಯೊಬ್ಬ ಕಸ್ಟಡಿಯಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ಮುಂಬೈನ ಘಾಟ್ಕೋಪರ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್​ ಅಧಿಕಾರಿಗಳನ್ನು ದೋಷಿ ಎಂದು ಪರಿಗಣಿಸಿದ ಸಿಬಿಐ ನ್ಯಾಯಾಲಯವು, ಇಬ್ಬರೂ ಅಧಿಕಾರಿಗಳಿಗೆ 7 ವರ್ಷ ಜೈಲು ಹಾಗೂ ತಲಾ 62,000 ರೂ. ದಂಡ ವಿಧಿಸಿದ್ದು, ಮೃತ ಆರೋಪಿ ತಾಯಿಗೆ 1 ಲಕ್ಷ ನೀಡಬೇಕು ಎಂದು ತಿಳಿಸಿದೆ ಎಂದು ವರದಿಯಾಗಿದೆ.

ಪ್ರಕರಣ ಹಿನ್ನಲೆ

ಸೆಪ್ಟೆಂಬರ್ 11, 2009 ರಂದು ಮನೆಗಳ್ಳತನ ಪ್ರಕರಣದಲ್ಲಿ ಅಲ್ತಾಫ್​ ಖಾದಿರ್​ನ್ನು ಪೊಲೀಸರು ಆತನ ನಿವಾಸದಿಂದ ಕರೆದೊಯ್ದ ಕೆಲವೇ ಗಂಟೆಗಳಲ್ಲಿ ಆರೋಪಿ ಸಾವನ್ನಪ್ಪಿದ್ದು, ವೈದ್ಯಕೀಯ ತಪಾಸಣೆಯಲ್ಲಿ ಶೇಖ್​ ತಲೆಯ ಮೇಲಿನ ಗಂಭೀರ ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು.

ಎಫ್‌ಐಆರ್ ಪ್ರಕಾರ, ಮೂವರು ಪೊಲೀಸ್ ಅಧಿಕಾರಿಗಳು ಶೇಖ್ ಅವರ ನಿವಾಸಕ್ಕೆ ಹೋಗಿ ಅವರನ್ನು ಕರೆದುಕೊಂಡು ಠಾಣೆಗೆ ಬಂದರು. ಬೆಳಿಗ್ಗೆ 9 ಗಂಟೆ ಸುಮಾರಿಗೆ ಅಧಿಕಾರಿಯೊಬ್ಬರು ಖೈದಿಗಳ ಭೇಟಿ ಮಾಡಲು ಬಂದಿದ್ದಾರೆ. ಈ ವೇಳೆ ಬಂಧನ ಕೋಣೆಯಲ್ಲಿ ಶೇಖ್​​ ಮಲಗಿದ್ದನ್ನು ಗಮನಿಸಿದ ಇವರು ಆತನನ್ನು ಎಬ್ಬಿಸಲು ಪ್ರಯತ್ನಿಸಿದರು. ಆದರೆ ಇವರು ಏಳದ ಕಾರಣ ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಶೇಖ್​ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಶೇಖ್ ಮಾದಕ ವ್ಯಸನಿಯಾಗಿದ್ದನು. ಈತನನ್ನು ಬಂಧಿಸಿದಾಗ ಮದ್ಯ ಸೇವಿಸಿದ್ದ ಎಂದು ಪೊಲೀಸರು ತಿಳಿಸಿದ್ದರು. ವೈದ್ಯಕೀಯ ಪರೀಕ್ಷೆಯ ನಂತರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮೃತಪಟ್ಟಿದ್ದಾನೆ ಎಂದು ಸೂಚಿಸಿದ್ದರು. ಆದರೆ ಶೇಖ್ ಅವರ ತಾಯಿ ತಮ್ಮ ಮಗನ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಹೈಕೋರ್ಟ್​ನಲ್ಲಿ ರಿಟ್​ ಅರ್ಜಿ ಸಲ್ಲಿಸಿದ್ದು, ಈ ಪ್ರಕರಣವನ್ನು ಅಪರಾಧ ವಿಭಾಗದಿಂದ ಸಿಬಿಐಗೆ ವರ್ಗಾಯಿಸಲಾಯಿತು.

ಪೊಲೀಸರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್​, ಪೊಲೀಸ್​ ಠಾಣೆಯಲ್ಲಿ ಚಿತ್ರಹಿಂಸೆ ನಿಡಿದ ಹಿನ್ನಲೆ ಶೇಕ್​ ಮೃತಪಟ್ಟಿರಬಹುದು ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ತೀರ್ಪು ನೀಡಿತ್ತು.

ರಿಟ್​ ಅರ್ಜಿಯಲ್ಲೇನಿತ್ತು?

ಮೃತನ ತಾಯಿ ಸಲ್ಲಿಸಿದ ಕ್ರಿಮಿನಲ್​ ರಿಟ್​ ಅರ್ಜಿಯಲ್ಲಿ ಘಟ್ಕೋಪರ್ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳು ಚಿತ್ರಹಿಂಸೆ ನೀಡಿದ ಪರಿಣಾಮ ಶೇಖ್​ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದ್ದರು.

ತನಿಖೆ ಪೂರ್ಣಗೊಂಡ ನಂತರ, ಸಿಬಿಐ ಡಿಸೆಂಬರ್ 30, 2010 ರಂದು ಖೇಡೇಕರ್, ಕೋಲೇಕರ್ ಮತ್ತು ಆಗಿನ ಪೊಲೀಸ್ ನಾಯಕ್ ಆಗಿದ್ದ ಸಯಾಜಿ ಬಾಪುರಾವ್ ಥೋಂಬಾರೆ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. ವಿಚಾರಣೆಯ ಸಮಯದಲ್ಲಿ ಥೋಂಬಾರೆ ಅವಧಿ ಮುಗಿದುಹೋಯಿತು ಮತ್ತು ಅವರ ವಿರುದ್ಧದ ಪ್ರಕರಣವನ್ನು ವಜಾಗೊಳಿಸಲಾಯಿತು ಎಂದು ಅಧಿಕಾರಿ ತಿಳಿಸಿದರು.

ಕುಟುಂಬದ ಪ್ರತಿಕ್ರಿಯೆ

ತೀರ್ಪಿನ ನಂತರ, ಶೇಖ್ ಅವರ ತಾಯಿ ಶಿಕ್ಷೆಯನ್ನು ಹೆಚ್ಚಿಸುವಂತೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದರು. ನ್ಯಾಯಾಲಯದ ವಿಚಾರಣೆಗಳಿಗೆ ಹಾಜರಾಗುವ ನಡುವೆ ತಾನು ಮತ್ತು ತನ್ನ ಮಗಳು ಮನೆಕೆಲಸ ಮಾಡುವುದರಿಂದ ಇದು ಕಷ್ಟಕರ ಸಮಯವಾಗಿದೆ ಎಂದು ಅವರು ಹೇಳಿದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net