More

    ಮತ್ತೆ ಬಂದರು ಕಮಲ್ ಹಾಸನ್; ಬಾಕ್ಸ್​ಆಫೀಸ್​ನಲ್ಲಿ ತ್ರಿವಿಕ್ರಮ

    ಕಮಲ್ ಹಾಸನ್, ಫಹಾದ್ ಫಾಸಿಲ್, ವಿಜಯ್ ಸೇತುಪತಿಯಂತಹ ಸ್ಟಾರ್ ನಟರು, ಜನಪ್ರಿಯ ನಿರ್ದೇಶಕ, ದೊಡ್ಡ ನಿರ್ಮಾಣ ಸಂಸ್ಥೆ … ಇವೆಲ್ಲದರಿಂದ ‘ವಿಕ್ರಮ್ ಓಪನಿಂಗ್ ಚೆನ್ನಾಗಿರಬಹುದು, ಚಿತ್ರವೂ ಒಂದು ಮಟ್ಟಕ್ಕೆ ಗೆಲ್ಲಬಹುದು ಎಂಬ ಮಾತಿತ್ತು. ಆದರೆ, ‘ವಿಕ್ರಮ್ ಎಲ್ಲರ ನಿರೀಕ್ಷೆಯನ್ನು ಸುಳ್ಳು ಮಾಡಿದೆ. ಬಿಡುಗಡೆಯಾದ ಒಂದು ವಾರದಲ್ಲಿ 250 ಕೋಟಿ ಕಲೆಕ್ಷನ್ ಮಾಡಿದೆ. ಇನ್ನಷ್ಟು ದಿನಗಳ ಕಾಲ ವಿಕ್ರಮನ ಗುಡುಗು ಕಡಿಮೆಯಾಗುವಂತೆ ಕಾಣುತ್ತಿಲ್ಲ.

    ಇಷ್ಟಕ್ಕೂ ‘ವಿಕ್ರಮ್ ಯಶಸ್ವಿಯಾಗುತ್ತಿರುವುದೇಕೆ? ಅಂಥದ್ದೇನಿದೆ ಆ ಚಿತ್ರದಲ್ಲಿ? ಎಂಬ ಪ್ರಶ್ನೆಗಳು ಬರಬಹುದು. ಬಹಳ ದಿನಗಳೇ ಆಗಿತ್ತು ಕಮಲ್ ಹಾಸನ್ ಪಕ್ಕಾ ಕಮರ್ಷಿಯಲ್ ಚಿತ್ರವೊಂದರಲ್ಲಿ ನಟಿಸಿ. ಅದು ‘ವಿಕ್ರಮ್​ನಲ್ಲಿ ಸಾಧ್ಯವಾಗಿದೆ.

    1986ರಲ್ಲಿ ಬಿಡುಗಡೆಯಾದ ‘ವಿಕ್ರಮ್​ನ ಒಂದು ಪಾತ್ರ ಮತ್ತು ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ‘ಕೈದಿ’ಯ ಒಂದು ಎಳೆ ಮತ್ತು ಒಂದಿಷ್ಟು ಪಾತ್ರಗಳ ಸಮಾಗಮವೇ ಈ ‘ವಿಕ್ರಮ್. ಹಾಗಾಗಿ, ಈ ‘ವಿಕ್ರಮ್ ಏಕಕಾಲಕ್ಕೆ ಎರಡು ಚಿತ್ರಗಳ ಮುಂದುವರೆದ ಭಾಗದಂತೆ ಕಾಣುತ್ತದೆ. ಹಾಗಂತ ಕಥೆ ಇಲ್ಲಿಗೆ ಮುಗಿಯುತ್ತದೆ ಎಂದು ಹೇಳುವುದು ಕಷ್ಟ. ಸಂತಾನಂ ಎಂಬ ಒಬ್ಬ ಡ್ರಗ್​ಲಾರ್ಡ್ ಅಂತ್ಯದೊಂದಿಗೆ ಈ ಭಾಗ ಮುಗಿದಿದೆ ಅಷ್ಟೇ. ಹಾಗಂತ ಕಥೆ ಮುಗಿದಿಲ್ಲ, ರೊಲೆಕ್ಸ್ ಎಂಬ ಇನ್ನೊಬ್ಬ ಕ್ರಿಮಿನಲ್​ನ ಎಂಟ್ರಿಯೊಂದಿಗೆ ‘ವಿಕ್ರಮ್ 2’ಗೆ ಲಿಂಕ್ ಕೊಡಲಾಗಿದೆ.

    ಹಾಗೆ ನೋಡಿದರೆ, ಚಿತ್ರದ ಮೊದಲಾರ್ಧದಲ್ಲಿ ಕಮಲ್ ಹಾಸನ್ ಇರುವುದೇ ಕಡಿಮೆ. ಚಿತ್ರದ ಆರಂಭದಲ್ಲೇ ಅವರ ಕೊಲೆಯಾಗುತ್ತದೆ. ಆ ಕೊಲೆಯನ್ನು ತನಿಖೆ ಮಾಡುವ ಅಧಿಕಾರಿಯಾಗಿ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಆ ನಂತರ ಏನಾಗುತ್ತದೆ ಎಂಬುದೇ ಚಿತ್ರದ ಸ್ವಾರಸ್ಯ. ಚಿತ್ರದ ಹೈಲೈಟ್ ಎಂದರೆ ಆಕ್ಷನ್ ದೃಶ್ಯಗಳು ಮತ್ತು ಕಮಲ್ ಹಾಸನ್ ಅಭಿನಯ. ಕಮಲ್ ಹಾಸನ್ ಅವರನ್ನು ಈ ರೀತಿ ನೋಡಿ ಹಲವು ವರ್ಷಗಳಾಗಿದ್ದರಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಕಮಲ್ ಅವರಿಗಷ್ಟೇ ಅಲ್ಲ, ತಮಿಳು ಚಿತ್ರರಂಗಕ್ಕೆ ಒಂದು ದೊಡ್ಡ ಹಿಟ್ ಬೇಕಾಗಿತ್ತು. ಅದು ‘ವಿಕ್ರಮ್ ಮೂಲಕ ಸಿಕ್ಕಿದೆ.

    ರೊಲೆಕ್ಸ್​ಗೆ ರೊಲೆಕ್ಸ್: ವಿಜಯ್ ಅಭಿನಯ್ ‘ಬೀಸ್ಟ್’ ಮಾಡಿದ ಒಟ್ಟಾರೆ ಗಳಿಕೆಯನ್ನು, ‘ವಿಕ್ರಮ್ ಐದು ದಿನಗಳಲ್ಲಿ ಮಾಡಿದೆ. ಚಿತ್ರ ಗೆದ್ದಿರುವ ಖುಷಿಯನ್ನು, ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಕೃತಜ್ಞತೆ ಅರ್ಪಿಸುವ ಮೂಲಕ ಸಂಭ್ರಮಿಸುತ್ತಿದ್ದಾರೆ ಕಮಲ್ ಹಾಸನ್. ಮೊದಲಿಗೆ ನಿರ್ದೇಶಕರಿಗೆ ಬರೋಬ್ಬರಿ 65 ಲಕ್ಷ ರೂ ಬೆಲೆಯ ಐಷಾರಾಮಿ ಲೆಕ್ಸಸ್ ಕಾರನ್ನು ಅವರು ಉಡುಗೊರೆಯಾಗಿ ನೀಡಿದರು. 13 ಸಹಾಯಕ ನಿರ್ದೇಶಕರಿಗೆ ಬೈಕುಗಳನ್ನು ಉಡುಗೊರೆಯಾಗಿ ಕೊಟ್ಟರು. ಇನ್ನು, ಚಿತ್ರದಲ್ಲಿ ರೊಲೆಕ್ಸ್ ಎಂಬ ಪಾತ್ರ ಮಾಡಿರುವ ನಟ ಸೂರ್ಯಗೆ 45 ಲಕ್ಷ ರೂ. ಬೆಲೆಯ ರೊಲೆಕ್ಸ್ ವಾಚನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

    ಮಗಳ ಕಣ್ಮುಂದೆಯೇ ಸಾವಿಗೀಡಾದ ತಂದೆ, ಭೀಕರ ಅಪಘಾತದಲ್ಲಿ ಪುತ್ರಿಗೆ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts