

ಹಾವೇರಿ: ಭೀಕರ ಅಪಘಾತವೊಂದರಲ್ಲಿ ಮಗಳ ಕಣ್ಮುಂದೆಯೇ ತಂದೆ ಸಾವಿಗೀಡಾಗಿದ್ದರೆ, ಮತ್ತೊಂದೆಡೆ ಪುತ್ರಿಯ ಗಾಯಗೊಂಡಿದ್ದಾಳೆ. ಹಾವೇರಿ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ.
ಹಾವೇರಿ ನಗರದ ಹೊರವಲಯದ ಹಾನಗಲ್ ರಸ್ತೆಯಲ್ಲಿ ಬೈಕ್-ಕ್ಯಾಂಟರ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚನ್ನಬಸಪ್ಪ ಮಂಟಗಣಿ (45) ಮೃತಪಟ್ಟವರು. ಅವರ ಪುತ್ರಿ ದೀಪಾ ಮಂಟಗಣಿ (18) ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸ್ಥಳಕ್ಕೆ ಹಾವೇರಿ ಸಂಚಾರ ಪೊಲೀಸರು ತಕ್ಷಣ ಧಾವಿಸಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಕ್ಯಾಂಟರ್ ವಾಹನ ಮುಟ್ಟುಗೋಲು ಹಾಕಿಕೊಂಡಿದ್ದಲ್ಲದೆ, ಕ್ಯಾಂಟರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.