

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಸುದೀರ್ ಗ್ಯಾಪ್ ಬಳಿಕ ಮತ್ತೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. "ಪೊಲೀಸ್ ಸ್ಟೋರಿ' ಸರಣಿ ಸೇರಿ 10ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ಅವರು, ಇದೀಗ "ಡೆಡ್ಲಿ ಕಿಲ್ಲರ್' ಚಿತ್ರ ನಿರ್ದೇಶಿಸುತ್ತಿದ್ದಾರೆ. ವಿಭಿನ್ನವಾದ ಆ್ಯಕ್ಷನ್, ಥ್ರಿಲ್ಲರ್, ಹಾರರ್ ಕಥಾಹಂದರದ ಈ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗಷ್ಟೆ ಚಿತ್ರದ ಸೆನ್ಸಾರ್ ಆಗಿದ್ದು, "ಯು/ಎ' ಪ್ರಮಾಣಪತ್ರ ದೊರೆತಿದೆ. "ಡೆಡ್ಲಿ ಕಿಲ್ಲರ್' ಚಿತ್ರಕ್ಕೆ ಅಭಯ್ ವೀರ್ ನಾಯಕನಾಗಿದ್ದು, ಅವರಿಗೆ ನಿವೀಕ್ಷಾ ಜೋಡಿಯಾಗಿದ್ದಾರೆ.
ಐವರು ವಿಲನ್ಗಳ ಜತೆ ಹುಡುಗಿಯೊಬ್ಬಳನ್ನು ಪೊಲೀಸರು ಆಂಧ್ರ ಪ್ರದೇಶದಲ್ಲಿ ಬಂಧಿಸಿ ಕರ್ನಾಟಕಕ್ಕೆ ಕರೆತರುವಾಗ ಅವರೆಲ್ಲರೂ ತಪ್ಪಿಸಿಕೊಳ್ಳುತ್ತಾರೆ. ಅವರನ್ನು ಪೊಲೀಸರು ಹೇಗೆ ಹಿಡಿಯುತ್ತಾರೆ? ಎಂಬುದೇ ಚಿತ್ರದ ಕಥಾವಸ್ತು. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ. ಮಲ್ಲಿಕಾರ್ಜುನ್ ಛಾಯಾಗ್ರಹಣ, ದೀಪು ಸಂಕಲನ ಚಿತ್ರದಲ್ಲಿರಲಿವೆ.
ಥ್ರಿಲ್ಲರ್ ಮಂಜು ನಿರ್ದೇಶನದ ಚಿತ್ರಗಳಲ್ಲಿ ಸಾಹಸ ದೃಶ್ಯಗಳಿಗೆ ಪ್ರಾಮುಖ್ಯತೆ ಇರುವುದು ಸಹಜ. ಅದೇ ರೀತಿ "ಡೆಡ್ಲಿ ಕಿಲ್ಲರ್'ನಲ್ಲು ಆರು ಸಾಹಸ ದೃಶ್ಯಗಳಿದ್ದು, ಥ್ರಿಲ್ಲರ್ ಮಂಜು ಅವರೇ ಆ್ಯಕ್ಷನ್ ಸಂಯೋಜನೆ ಮಾಡಿದ್ದಾರೆ. ಅಭಯವ್, ನಿವೀಾ ಜತೆ ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್ ತಾರಾಗಣದಲ್ಲಿದ್ದಾರೆ.