ಈಗ ಕೇವಲ ಬಿಳಿ ಬಟ್ಟೆಗಳನ್ನು ಮಾತ್ರ ಧರಿಸುತ್ತೇನೆ: ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್​

Untitled design - 2023-08-15T164242.875
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್​ ಅವರು ಇಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಜನ್ಮದಿನದ ಹಿನ್ನಲೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಘಣ್ಣ, ಕೆಲವು ವಿಷಯಗಳನ್ನು ಮನಬಿಚ್ಚಿ ಹಂಚಿಕೊಂಡಿದ್ದಾರೆ.

"ಎರಡು ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೆ ಬೇಸರವಾಗಿದೆ. ಅಪ್ಪು ಹೋದ ಮೇಲೆ ಜನ್ಮದಿನ ಬೇಡ ಅಂತ ತೀರ್ಮಾನ ಮಾಡಿದ್ದೀನಿ. ಇವತ್ತು ಬೆಳಗ್ಗೆ ಹೋಗಿ ಅವನ ದರ್ಶನ ಮಾಡಿಕೊಂಡು ಬಂದೆ. ಅವನು ನನಗಿಂತ 10 ವರ್ಷ ಚಿಕ್ಕವನು. ಪುನೀತ್​ ಹೋದ ಮೇಲೆ ಹೊಸ ಬಟ್ಟೆ ಹಾಕೋದೆ ಬೇಡ ಅನಿಸಿದೆ. ಅದಕ್ಕೆ ನಾನು ಈಗ ಕೇವಲ ಬಿಳಿ ಬಟ್ಟೆಗಳನ್ನು ಮಾತ್ರ ಧರಿಸುತ್ತೇನೆ" ಎಂದು ಹೇಳಿದರು.

"ಪುನೀತ್ ಇದ್ದಾಗ. ಬೆಳಗ್ಗೆ ಬಂದು ಕಾಲಿಗೆ ನಮಸ್ಕರಿಸಿ, ಮಕ್ಕಳ ಕೈಯಲ್ಲಿ ಗಿಫ್ಟ್ ಕಳುಹಿಸುತ್ತಿದ್ದ. ಇವತ್ತು ನಾನು ಬಹಳ ಎಮೋಷನಲ್ ಆಗಿದ್ದೀನಿ. ಅಪ್ಪಾಜಿ ನಮಗೆ ಯಾವಗಲೂ ಹೇಳೋರು, ಇಂಡಿಯಾ ಎಂದು ಕರೆಯುವುದನ್ನು ನಿಲ್ಲಿಸಬೇಕು. ಭಾರತ ಎಂದು ಕರೆಯಬೇಕು. ವಂದೇ ಮಾತರಂ ಅನ್ನೋದು ಈಗ ಒಂಡೇ ಮಾತರಂ ಆಗಿದೆ. ನಾವು ದೇಶದ ಮೇಲೆ ಪ್ರೀತಿ, ಭಕ್ತಿ ಹೆಚ್ಚಿಸಿಕೊಳ್ಳಬೇಕು. ಯಾರಾದರೂ ನಿಮ್ಮನ್ನು ಯಾವ ದೇಶ ಅಂದ್ರೆ ಭಾರತ ಎಂದು ಹೇಳಿ" ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net