ಸಾಲದ ಹೊರೆಗೆ ಒಂದೇ ಕುಟುಂಬದ ಮೂವರು ಪ್ರಾಣ ತ್ಯಾಗ; ಮಗಳ ಮೇಲಿನ ಅತಿಯಾದ ಪ್ರೀತಿಯೇ ಮುಳುವಾಯ್ತಾ?

family ends life
Published on

ಹಾವೇರಿ : ತರಕಾರಿ ಮಾರಾಟ ಮಾಡಿ ಮಗಳನ್ನು ಸಾಕಿ ವಿದ್ಯಾಭ್ಯಾಸ ನೀಡಿ ಮದುವೆ ಮಾಡಿಕೊಟ್ಟಿದ್ದ ಕುಟುಂಬ ಇದೀಗ ಮಗಳ ಜತೆಗೆ ಆತ್ಮಹತ್ಯೆ ಮಾಡಿಕೊಂಡಿದೆ. ಒಂದೇ ಕುಟುಂಬದ ಮೂವರು ಸದಸ್ಯರ ಆತ್ಮಹತ್ಯೆಗೆ ಕಾರಣ ಹೊಸ ಮನೆ, ಮಗಳ ಮದುವೆ ಎನ್ನಲಾಗಿದೆ.

ತಂದೆ ಹನುಮಂತಗೌಡ ಪಾಟೀಲ (54) ತಾಯಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಮೃತರು. ನೇಣು ಬಿಗಿದುಕೊಂಡು ಒಂದೇ ಕುಟುಂಬದ ಮೂವರು ಮನೆಯೊಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಾವಿಗೆ ಮೂಲ ಕಾರಣ ಹೊಸ ಮನೆ ಹಾಗೂ ಮಗಳ ಮದುವೆ ಎನ್ನಲಾಗುತ್ತಿದೆ. ವಸತಿ ನಿರ್ಮಾಣಕ್ಕಾಗಿ ಹಾಗೂ ಮುದ್ದಾಗಿ ಬೆಳಿಸಿದ ಮಗಳ ಮದುವೆಗೆಂದು ಸುಮಾರು 25 ಲಕ್ಷ ರೂಪಾಯಿಗೂ ಹೆಚ್ಚು ಹಣ ಸಾಲಮಾಡಿ ತಂದೆ ಹನುಮಂತಗೌಡ ಪಾಟೀಲ್ ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದರಂತೆ. ಮನೆ ನಿರ್ಮಾಣಕ್ಕಾಗಿ ಸಾಲ, ಮಗಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವಳ ಮದುವೆಗಾಗಿ ಸಾಲ ಮಾಡಿಕೊಂಡು ಹೈರಾಣಾಗಿದ್ದ ಕುಟುಂಬ ಕಳೆದ ಒಂದು ತಿಂಗಳಿನಿಂದ ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಭಾರಿ ಯತ್ನಿಸಿದ್ದರು ಎನ್ನಲಾಗಿದೆ. ನಿನ್ನೆ ಮಧ್ಯೆ ರಾತ್ರಿ ಸೂಸೈಡ್ ಮಾಡಿಕೊಂಡಿದ್ದ ಅಪ್ಪ - ಅಮ್ಮನನ್ನು ನೋಡಿದ ಮಗಳು ಕೂಡಾ ನನ್ನಿಂದಲೇ ಇದೆಲ್ಲಾ ಆಗಿದೆ ಎಂದು ಮನನೊಂದು ಸಾವಿಗೆ ಶರಣಾಗಿದ್ದಾಳೆಂದು ಹೇಳಲಾಗುತ್ತಿದೆ.

ಈ ಕುಟುಂಬದ ಸಾವಿಗೆ ಮೂಲ ಕಾರಣ ಸಾಲ. ಹನುಮಂತೆಗೌಡ ಪಿತ್ರಾರ್ಜಿತವಾಗಿ ಬಂದಿದ್ದ ಒಂದು ಏಕರೆ ಜಮಿನನ್ನು ಮಾರಾಟ ಮಾಡಿ ಕೃಷಿ ಜತೆಗೆ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ದೊಡ್ಡ ಪ್ರಮಾಣದಲ್ಲಿ ತರಕಾರಿ ವ್ಯಾಪಾರ ಮಾಡಲು ಹೊಸದಾಗಿ ಟಾಟಾ ಎಸಿ ತೊಗೊಂಡಿದ್ದರು. ಆದರೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ ಹಿನ್ನಲೆ ಕುಟುಂಬಸ್ಥರು ನೇಣಿಗೆ ಶರಣಾಗಿದ್ದಾರೆಂದು ಮೃತರ ಸಂಬಂಧಿಕರು ಹೇಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net