ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ; ಸ್ಥಳದಲ್ಲಿಯೇ ಮೂವರ ಸಾವು

10005
Published on

ತಮಿಳುನಾಡು: ದ್ವಿಚಕ್ರ ವಾಹನಕ್ಕೆ ಐಷರ್ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಮೂವರು ಹದಿಹರೆಯದ ಮಂದಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ತಮಿಳರಸಿ(19), ತಮಿಳುಪ್ರಿಯಾ(17) ಹಾಗೂ ಅಂಬೇಡ್ಕರ್ ವಲವನ್(14) ಮೃತಪಟ್ಟವರು. ಈ ಘಟನೆ ತಮಿಳುನಾಡಿನ ಡೆಂಕಣಿಕೋಟೆ ಡೆಂಕಣಿಕೋಟೆ ಸಮೀಪದ ಸಿಂಗಾರತೋಪು ಬಳಿ ನಡೆದಿದೆ.

ಸಹೋದರಿಯರಿಬ್ಬರು ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದ. ಇಂದು ಕಾಲೇಜಿನಿಂದ ಮರಳುವಾಗ ಸಂಬಂಧಿಕರ ಮಗ ಅಂಬೇಡ್ಕರ್ ವಲವನ್​ನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಹಿಂಬದಿಯಿಂದ ಬಂದ ಐಷರ್ ಕ್ಯಾಂಟರ್ ವಾಹನ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

ವಾಹನ ಕೋಳಿಯ ಮೇವನ್ನು ಸಾಗಾಟ ಮಾಡುತ್ತಿತ್ತು. ಘಟನಾ ಸ್ಥಳಕ್ಕೆ ಡೆಂಕಣಿಕೋಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಸ್ಥರ ಹಾಗೂ ಸಂಬಂಧಿಕರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಡೆಂಕಣಿಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net