ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಮೂವರಿಗೆ ಗಂಭೀರ ಗಾಯ..

Accident
Published on

ಬೀದರ್: ರಾಜ್ಯದಲ್ಲಿ ಇಂದು ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಯುವ ಕಾಂಗ್ರೆಸ್​ಗೆ ಸೇರಿದ ಜೀಪೊಂದು ಪಲ್ಟಿಯಾಗಿ ಒಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಾಯಗೊಂಡ ಬೆನ್ನಿಗೆ ಮತ್ತೊಂದು ಅಪಘಾತ ಸಂಭವಿಸಿದೆ. ಇಲ್ಲಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪೂರ್ ಬಳಿ ಈ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನ ಮತ್ತು ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದ್ದು, ಕ್ರೂಸರ್ ಬಹುತೇಕ ಜಖಂಗೊಂಡಿದೆ. ಸಾವಿಗೀಡಾದ ಇಬ್ಬರೂ ಕ್ರೂಸರ್​​ನಲ್ಲಿದ್ದವರು.

ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಸಂತಪೂರ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಔರಾದ್ ತಾಲೂಕಿನ ಹೋಕ್ರಾಣ ಗ್ರಾಮದ ದೀಪಕ ಕಸ್ತೂರೆ (60), ಸತ್ಯವಾನ ದಬಾಕ (25) ಮೃತಪಟ್ಟವರು. ಮೃತಪಟ್ಟವರು ಹಾಗೂ ಗಾಯಾಳುಗಳ ಕುರಿತ ಖಚಿತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net