ಯುವ ಕಾಂಗ್ರೆಸ್ ಜೀಪ್ ಪಲ್ಟಿ; ಒಬ್ಬ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ..

Jeep F
Published on

ಬಾಗಲಕೋಟೆ: ಯೂತ್ ಕಾಂಗ್ರೆಸ್​​ನವರಿಗೆ ಸೇರಿದ ಜೀಪೊಂದು ಪಲ್ಟಿಯಾಗಿ ಒಬ್ಬರು ಸ್ಥಳದಲ್ಲೇ ಸಾವಿಗೀಡಾದರೆ ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಇಂಥದ್ದೊಂದು ಭೀಕರ ಅಪಘಾತ ಸಂಭವಿಸಿದೆ.

ಇಳಕಲ್ ತಾಲೂಕಿನ ಹೆರೂರು ಗ್ರಾಮದ ಶಿವು ಅಳವಂಡಿ (30) ಸಾವಿಗೀಡಾಗಿದ್ದು, ಸಂಗಮೇಶ್ ಗೋನಾಳ, ನಾಗರಾಜ, ಮಹಾಂತೇಶ್ ಛಲವಾದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಳಕಲ್ ಸಮೀಪ ಜೀಪ್ ಪಲ್ಟಿಯಾಗಿದ್ದು, ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾಗಿರುವ ಜೀಪ್ ಎದುರು ಯೂತ್ ಕಾಂಗ್ರೆಸ್ ಕುಷ್ಟಗಿ ಎಂದು ಬರೆಯಲಾಗಿದೆ. ಜೀಪ್ ಯಾರಿಗೆ ಸೇರಿದ್ದು, ಜೀಪ್​ನಲ್ಲಿದ್ದವರು ಎಲ್ಲಿಂದ ಎಲ್ಲಿಗೆ ತೆರಳುತ್ತಿದ್ದರು ಎಂಬಿತ್ಯಾದಿ ಮಾಹಿತಿ ಕುರಿತು ನಿಖರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಇಳಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net