ಶಾಸಕ ಸತೀಶ್​ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಮೂವರ ಬಂಧನ, ಸ್ಮಶಾನದಲ್ಲಿ ಸಿಕ್ಕಿಬಿದ್ದ ಆರೋಪಿ

Satish Reddi
Published on

ಬೆಂಗಳೂರು: ಶಾಸಕ ಸತೀಶ್​ ರೆಡ್ಡಿಯವರ ಮನೆಯಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಸಾಗರ್​ ತಾಪ, ಶ್ರೀಧರ್ ಗೌಡ ಹಾಗೂ ನವೀನ್ ಕಾಳಪ್ಪ ಬಂಧಿತರು.ಆರೋಪಿಗಳು.

ಮೂವರೂ ಆರೋಪಿಗಳು ಮದ್ಯಪಾನ ಮಾಡಿಹೋಗಿ ಈ ಕೃತ್ಯ ಎಸಗಿದ್ದು, ಆ ಬಳಿಕವೂ ಇವರು ಬೆಂಗಳೂರಿನಲ್ಲೇ ಇದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರೂ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಶಾಸಕ ಸತೀಶ್​ ರೆಡ್ಡಿ ಈ ಭಾಗದಲ್ಲಿ ಶ್ರೀಮಂತ ಎಂಬ ಒಂದೇ ಕಾರಣಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಶ್ರೀಮಂತರೇ ಶ್ರೀಮಂತರಾಗುತ್ತಾ ಇದ್ದಾರೆ, ಬಡವರು ಬಡವರಾಗಿಯೇ ಇದ್ದಾರೆ ಎಂದು ಆರೋಪಿಗಳು ಹೀಗೆ ಮಾಡಿದ್ದು, ಶಾಸಕರಿಗೂ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ.

ಆರೋಪಿಗಳಲ್ಲಿ ಇಬ್ಬರನ್ನು ಗಾರ್ವೇಬಾವಿಪಾಳ್ಯ ಬಳಿ ಬಂಧಿಸಿರುವ ಪೊಲೀಸರು ಮತ್ತೊಬ್ಬನನ್ನು ಬಂಡೇಪಾಳ್ಯದ ಸ್ಮಶಾನದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ಕಾರುಗಳಿಗೆ ಬೆಂಕಿ ಹಚ್ಚಿ ಓಡಿಹೋಗುತ್ತಿರುವುದು, ಅದರಲ್ಲಿ ಒಬ್ಬ ಕುಂಟುತ್ತಿರುವುದು ಸಿಸಿಟಿವಿ ಕ್ಯಾಮರಾ ಕ್ಲಿಪ್ಪಿಂಗ್​ನಲ್ಲಿ ಸೆರೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net