ನಕಲಿ ಚಿನ್ನ ತೋರಿಸಿ ಲಕ್ಷಾಂತರ ಹಣ ದೋಚಿದ್ದ ಖದೀಮರು ಪೊಲೀಸ್​ ವಶಕ್ಕೆ

theif
Published on

ವಿಜಯನಗರ: ಚಿನ್ನದ ಆಸೆ ತೋರಿಸಿ, ಲಕ್ಷಾಂತರ ಹಣ ದೋಚಿದ್ದ ಖದೀಮರನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೇರೆ ಪೊಲೀಸರು ಬಂಧಿಸಿದ್ದಾರೆ. ಕದ್ದ ಮಾಲು ಸಮೇತ ಸಿಕ್ಕಿಬಿದ್ದಿರುವ ಆರೋಪಿಗಳೆಂದರೆ ಕಾಸರಗೋಡು ಜಿಲ್ಲೆಯ ರಂಜಿತ್ ಶೆಟ್ಟಿ, ಹರಪನಹಳ್ಳಿಯ ಪ್ರಶಾಂತ್ ಮತ್ತು ಕೆ.ಬಿ.ವೆಂಕಟೇಶ್.

ಆರೋಪಿಗಳು ನ.6 ರಂದು ಅರಸೀಕೆರೆ ನಿವಾಸಿಯೊಬ್ಬರನ್ನು ಚಿನ್ನದ ನಾಣ್ಯಗಳನ್ನು ಮಾರಾಟ ಮಾಡುವುದಾಗಿ ಕರೆಸಿಕೊಂಡು, ನಕಲಿ ನಾಣ್ಯಗಳನ್ನು ತೋರಿಸಿ, ನಂತರ ಹಲ್ಲೆ ಮಾಡಿ 3 ಲಕ್ಷ ರೂಪಾಯಿ ನಗದನ್ನು ದೋಚಿಕೊಂಡು ಪರಾರಿಯಾಗಿದ್ದರು ಎನ್ನಲಾಗಿದೆ.

ಅರಸಿಕೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು. ಹಣ ದೋಚಿಕೊಂಡು ಪರಾರಿಯಾಗಿದ್ದ ಈ ಆರೋಪಿಗಳಿಂದ 2,53,000 ರೂಪಾಯಿ ಹಣ, 40 ಸಾವಿರ ಮೌಲ್ಯದ ಬೈಕ್ ಮತ್ತು ಒಂದು ಮೊಬೈಲನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net