ಪಂಜಾಬ್‌ನ ಮೂವರು ಭಾರತೀಯರು ಇರಾನ್‌ನಲ್ಲಿ ನಾಪತ್ತೆ; ಸುರಕ್ಷಿತವಾಗಿ ಪತ್ತೆಹಚ್ಚಲಿದ್ದೇವೆ ಎಂದ ರಾಯಭಾರ ಕಚೇರಿ| three-indians-missing

iran
Published on

ಇರಾನ್: ಪಂಜಾಬ್‌ನ ಸಂಗ್ರೂರ್, ಹೋಶಿಯಾರ್‌ಪುರ ಮತ್ತು ಎಸ್‌ಬಿಎಸ್ ನಗರದಿಂದ ಇರಾನ್‌ಗೆ ಪ್ರಯಾಣಿಸಿದ್ದ ಮೂವರು ಭಾರತೀಯರು ನಾಪತ್ತೆಯಾಗಿದ್ದಾರೆ ಎಂದು ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದ್ದು, ಅವರನ್ನು ತುರ್ತಾಗಿ ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದೆ.

ಕಾಣೆಯಾದ ಮೂವರು ವ್ಯಕ್ತಿಗಳನ್ನು ಹುಶನ್‌ಪ್ರೀತ್ ಸಿಂಗ್ (ಸಂಗ್ರೂರ್), ಜಸ್ಪಾಲ್ ಸಿಂಗ್ (ಎಸ್‌ಬಿಎಸ್ ನಗರ) ಮತ್ತು ಅಮೃತ್‌ಪಾಲ್ ಸಿಂಗ್ (ಹೋಶಿಯಾರ್‌ಪುರ) ಎಂದು ಗುರುತಿಸಲಾಗಿದೆ. ಅವರೆಲ್ಲರೂ ಮೇ 1 ರಂದು ಟೆಹ್ರಾನ್‌ನಲ್ಲಿ ಇಳಿದ ಸ್ವಲ್ಪ ಸಮಯದ ನಂತರ ನಾಪತ್ತೆಯಾಗಿದ್ದಾರೆ.

ಇರಾನ್‌ಗೆ ಪ್ರಯಾಣಿಸಿದ ಬಳಿಕ 3 ಭಾರತೀಯ ನಾಗರಿಕರ ಕುಟುಂಬ ಸದಸ್ಯರು ತಮ್ಮ ಸಂಬಂಧಿಕರು ಕಾಣೆಯಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿಗೆ ತಿಳಿಸಿದ್ದಾರೆ. ರಾಯಭಾರ ಕಚೇರಿಯು ಈ ವಿಷಯವನ್ನು ಇರಾನಿನ ಅಧಿಕಾರಿಗಳೊಂದಿಗೆ ಬಲವಾಗಿ ಚರ್ಚಿಸಿದೆ ಮತ್ತು ಕಾಣೆಯಾದ ಭಾರತೀಯರನ್ನು ತುರ್ತಾಗಿ ಪತ್ತೆಹಚ್ಚಬೇಕು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ವಿನಂತಿಸಿದೆ ಎಂದು ಭಾರತೀಯ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಪಂಜಾಬ್‌ನಲ್ಲಿರುವ ಒಬ್ಬ ಏಜೆಂಟ್ ಈ ಮೂವರಿಗೆ ದುಬೈ-ಇರಾನ್ ಮಾರ್ಗದ ಮೂಲಕ ಆಸ್ಟ್ರೇಲಿಯಾಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದ್ದ. ಅವರಿಗೆ ಇರಾನ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ. ಆದರೆ ಮೇ 1 ರಂದು ಅವರು ಇರಾನ್‌ಗೆ ಬಂದಿಳಿದ ಕೂಡಲೇ ಈ ಮೂವರನ್ನು ಅಪಹರಿಸಲಾಗಿದೆ ಎಂದು ಹೇಳಲಾಗಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net