

ಕೋಲಾರ: ಮನೆ ಬಳಿಯೇ ಆಟವಾಡುತ್ತಿದ್ದ ಮೂವರು ಮಕ್ಕಳನ್ನು ತನ್ನತ್ತ ಸೆಳೆದ ಜವರಾಯ ನೀರಿನ ರೂಪದಲ್ಲಿ ಬಂದು ಅವರ ಪ್ರಾಣಹೊತ್ತೊಯ್ದಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಬಂಗಾರಪೇಟೆ ಪಟ್ಟಣದ ಕುಂಬಾರಪಾಳ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಒಂದೇ ಕುಟುಂಬದ 8 ವರ್ಷದ ಬಾಲಕಿ ಮೋಹಿಕ, 7 ವರ್ಷದ ಬಾಲಕ ಫಯಾಜ್, 12 ವರ್ಷದ ಸಾದಿಕ್ ದುರ್ಮರಣಕ್ಕೀಡಾಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.