

ಬೆಂಗಳೂರು: ಬಸ್ನಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರೇ ಎಚ್ಚರ! ನಿಮ್ಮ ಪಕ್ಕದ ಸೀಟಿನಲ್ಲೇ ಕೂರಲು ಬರ್ತಾರೆ ಖತರ್ನಾಕ್ ಕಳ್ಳಿಯರು. ನೋಡೋಕೆ ಮುಗ್ಧರಂತೆ ಕಾಣುವ ಅವರ ಕೈಯಲ್ಲೊಂದು ಮಗು ಕೂಡ ಇರುತ್ತೆ... ಕೆಲವೇ ಕ್ಷಣದಲ್ಲಿ ನಿಮ್ಮ ಹಣ-ಚಿನ್ನಾಭರಣ ಲೂಟಿ ಮಾಡಿಕೊಂಡು ಪರಾರಿಯಾಗ್ತಾರೆ...
ಹೌದು, ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತುವ ಕಳ್ಳರ ಗ್ಯಾಂಗ್ಗೆ ಒಂಟಿ ಮಹಿಳೆಯರೇ ಟಾರ್ಗೆಟ್. ಇಂತಹದ್ದೇ ಪ್ರಕರಣದಲ್ಲಿ ಆದಿಲ್ ಪಾಷ (26) ಎಂಬಾತನನ್ನು ಆರ್.ಎಂ.ಸಿ. ಯಾರ್ಡ್ ಪೊಲೀಸರು ಬುಧವಾರ ಬಂಧಿಸಿದ್ದು, ಬಸ್ನಲ್ಲಿ ಕಳ್ಳನ ಮಾಡುತ್ತಿದ್ದ ತನ್ನ ಗ್ಯಾಂಗ್ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಅಂದ ಹಾಗೇ ಈ ಗ್ಯಾಂಗ್ನ್ನು ಈತನೇ ಮಾನಿಟರ್ ಮಾಡುತ್ತಿದ್ದ! ಇದನ್ನೂ ಓದಿರಿ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟು ವಿಕೃತಿ ಮೆರೆದ ಗಂಡ-ಅತ್ತೆ!
ಆರೋಪಿ ಆದಿಲ್ ಪಾಷ ಈ ಹಿಂದೆಯೂ ಅನೇಕ ಕಡೆ ಕಳ್ಳತನ ಮಾಡಿ ಜೈಲು ಸೇರಿದ್ದ. ಈತನೊಂದಿಗೆ ಕುಕೃತ್ಯಕ್ಕೆ ಇಳಿದಿದ್ದ ಕಳ್ಳಿಯರಿಬ್ಬರು ತಲೆಮರೆಸಿಕೊಂಡಿದ್ದಾರೆ. ಬಂಧಿತನಿಂದ 10 ಲಕ್ಷ ರೂ. ಮೌಲ್ಯದ 155 ಗ್ರಾಂ ಚಿನ್ನ ಹಾಗೂ 2 ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.