Weakness: ಇತ್ತೀಚಿನ ಅಧುನಿಕ ದಿನಗಳಲ್ಲಿ ಒತ್ತಡದ ಜೀವನದ ಮಧ್ಯ ಅನೇಕ ಪುರುಷರು ಸಾಮಾನ್ಯ ದೌರ್ಬಲ್ಯ ಹಾಗೂ ಆಯಾಸವನ್ನು ಎದುರಿಸುತ್ತಾರೆ. ಜೀವನ ಶೈಲಿಯೇ ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಯಾವಾಗಿದೆ.
ಇನ್ನು ಪುರುಷನ ಶಕ್ತಿ ಕೊರತೆಗೆ ಅನೇಕ ಅಂಶಗಳಿವೆ. ಉದಾಹರಣೆಗೆ ರಕ್ತ ಹೀನತೆ, ಕಡಿಮೆ ಟೆಸ್ಟೋಸ್ಟೆರಾನ್ ಮತ್ತು ಕಳಪೆ ಆಹಾರ ಪದ್ಧತಿಯೂ ಕೂಡ ದೌರ್ಬಲ್ಯಕ್ಕೆ ಕಾರಣವಾಗುತ್ತದೆ. ಮಹಿಳೆಯರಿಗಿಂತ ಪುರುಷರಲ್ಲಿ ದೌರ್ಬಲ್ಯ ಅಧಿಕ ಕಂಡುಬರುತ್ತಿದೆ.
ಜೀವನ ಶೈಲಿ, ಕಳಪೆ ನಿದ್ರೆ, ವ್ಯಾಯಾಮ ಹಾಗೂ ಆಹಾರ ಪದ್ಧತಿ ಕೂಡ ದೌರ್ಬಲ್ಯ ಮತ್ತು ಆಯಾಸಕ್ಕೆ ಕಾರಣವಾಗಿದೆ. ಪುರುಷರಲ್ಲಿ ಕಡಿಮೆ ದೌರ್ಬಲ್ಯಕ್ಕೆ ಕಾರಣವೇನು ಮತ್ತು ತಮ್ಮ ದೇಹದಲ್ಲಿ ಶಕ್ತಿಮಟ್ಟವನ್ನು ಹೆಚ್ಚಿಸೋದೇಗೆ ಎಂದು ತಿಳಿಯೋಣ..
1.ಆಹಾರ
ಪ್ರೋಟೀನ್, ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು, ಅಗತ್ಯವಾದ ಕ್ಯಾಲೋರಿಗಳು ಮತ್ತು ವಿಟಮಿನ್‌ಗಳಂತಹ ಅನೇಕ ಅಗತ್ಯ ಪೋಷಕಾಂಶಗಳ ಕೊರತೆಯು ದೇಹದಲ್ಲಿ ಆಯಾಸ ಅಥವಾ ಶಕ್ತಿಯ ಕೊರತೆಯನ್ನು ಉಂಟುಮಾಡಬಹುದು. ಹೀಗಾಗಿ, ಈ ಕೊರತೆ ನಿಗಿಸಲು ಸಾಕಷ್ಟು ತರಕಾರಿ, ಧಾನ್ಯ, ಪ್ರೋಟೀನ್ ಭರಿತ ಆಹಾರವನ್ನು ಸೇವಿಸುವುದರಿಂದ ವ್ಯಕ್ತಿಯ ದೇಹದಲ್ಲಿ ಶಕ್ತಿಮಟ್ಟ ಹೆಚ್ಚಿಸುತ್ತದೆ.
2.ವ್ಯಾಯಾಮ
ಅನೇಕ ಜನರು ವ್ಯಾಯಾಮ ಮಾಡದೇ ಕಡಿಮೆ ಶಕ್ತಿ ಅನುಭವಿಸುತ್ತಾರೆ. ವ್ಯಾಯಾಮ ದೇಹದಲ್ಲಿ ಅಧಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ, ಅತಿಯಾದ ವ್ಯಾಯಾಮವು ಆಯಾಸಿಗೆ ಕಾರಣವಾಗಬಹುದು. ಹೀಗಾಗಿ, ವಯಸ್ಸಿನ ಅನುಗುಣವಾಗಿ ಸಮತೋಲಿನ ವ್ಯಾಯಾಮ ಮಾಡುವುದು ಮುಖ್ಯ.
3.ಕಡಿಮೆ ಟೆಸ್ಟೋಸ್ಟೆರಾನ್
ಟೆಸ್ಟೋಸ್ಟೆರಾನ್ ಒಂದು ಲೈಂಗಿಕ ಹಾರ್ಮೋನ್, ಇದು ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಪುರುಷರ ವಯಸ್ಸಾದಂತೆ, ಅವರ ದೇಹವು ನೈಸರ್ಗಿಕವಾಗಿ ಕಡಿಮೆ ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತದೆ.
ನಿಮ್ಮ ದೇಹವನ್ನು ಶಕ್ತಿಯುತವಾಗಿಡಲು ನೀವು ಮೊದಲು ನಿಮ್ಮ ನೀರಿನ ಸೇವನೆಯನ್ನು ಹೆಚ್ಚಿಸಬೇಕು. ದೇಹದಲ್ಲಿ ಶಕ್ತಿ ಕಾಪಡಿಕೊಳ್ಳಲು ನೀರು ಬಹುಮುಖ್ಯ. ನಿಮ್ಮ ಆಹಾರದಲ್ಲಿ ಸಮೃದ್ಧವಾದ ತರಕಾರಿ, ಧಾನ್ಯ ಹಾಗೂ ಮೊಟ್ಟೆ, ಕೋಳಿ ಮತ್ತು ಮಾಂಸ ಸೇರಿಸಿಕೊಳ್ಳಬೇಕು.(ಏಜೆನ್ಸೀಸ್)
ಗೆಳೆಯನ ಲಿಂಗ ಪರಿವರ್ತಿಸಿ 18 ದಿನ ಲೈಂಗಿಕ ದೌರ್ಜನ್ಯ ಎಸಗಿದ ಸ್ನೇಹಿತ!
ವಿಷಕಾರಿಯಲ್ಲದ ಹಾವು ಕಚ್ಚಿದರೆ ಏನು ಮಾಡಬೇಕು? ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ… Snakes