ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರುಪಾಲು; ಒಬ್ಬನ ಶವ ಪತ್ತೆ, ಇನ್ನಿಬ್ಬರು ಇನ್ನೂ ನಾಪತ್ತೆ..

Dead body
Published on

ದಾವಣಗೆರೆ: ಮೋಜಿಗೆಂದು ಈಜಿಗಿಳಿದು ನೀರುಪಾಲಾಗುತ್ತಿರುವ, ಮುಳುಗಿ ಸಾಯುತ್ತಿರುವ ಪ್ರಕರಣಗಳು ಮುಂದುವರಿದಿದ್ದು, ಇಂದು ಅಂಥದ್ದೇ ಇನ್ನೊಂದು ಪ್ರಕರಣ ವರದಿಯಾಗಿದೆ. ಈ ಪ್ರಕರಣದಲ್ಲಿ ಮೂವರು ನೀರುಪಾಲಾಗಿದ್ದಾರೆ. ದಾವಣಗೆರೆಯ ಜಗಳೂರಿನಲ್ಲಿ ಈ ಪ್ರಕರಣ ನಡೆದಿದೆ.'

ಒಟ್ಟು ನಾಲ್ವರು ಇಂದು ಮಧ್ಯಾಹ್ನ ಕೆರೆಯಲ್ಲಿ ಈಜಲು ಹೋಗಿದ್ದರು. ಆ ಪೈಕಿ ಒಬ್ಬ ಸ್ವಲ್ಪಹೊತ್ತಿನ ಬಳಿಕ ಮನೆಗೆ ಹೋಗಿದ್ದ. ಉಳಿದ ಮೂವರು ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಹೀಗಾಗಿ ಆತ ಕೆರೆಗೆ ಬಂದು ನೋಡಿದಾಗ ಚಪ್ಪಲಿ-ಬಟ್ಟೆಗಳು ದಡದಲ್ಲೇ ಇದ್ದವು. ಇದರಿಂದ ಗಾಬರಿಗೊಂಡ ಆತ ಪಾಲಕರಿಗೆ ಮಾಹಿತಿ ನೀಡಿದ್ದ.

ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಫಯಾಜ್​ (12) ಎಂಬವನ ಶವ ಪತ್ತೆಯಾಗಿದೆ. ಉಳಿದಿಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net