

ಕಾಸರಗೋಡು: ರಾಷ್ಟ್ರೀಯ ಮುಷ್ಕರದ ವೇಳೆ ಕೆಲಸಕ್ಕೆ ಹಾಜರಾಗಿದ್ದ ಅಜಾನೂರು ಗ್ರಾಮಾಧಿಕಾರಿ ಜಯಲಕ್ಷ್ಮೀ ಅವರ ಕಚೇರಿಗೆ ನುಗ್ಗಿ, ಬೆದರಿಕೆ ಹಾಕಿರುವ ಕ್ರಮವನ್ನು ಕೇರಳ ಎನ್‌ಜಿಒ ಸಂಘ್ ಖಂಡಿಸಿದ್ದು, ಮಹಿಳಾ ಉದ್ಯೋಗಿಗೆ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಸಂಘಟನೆ ವತಿಯಿಂದ ಪ್ರತಿಭಟನಾ ಸಭೆ ನಡೆಸಲಾಯಿತು.
ಪ್ರತಿಭಟನಾಕಾರರು ಕಚೇರಿಗೆ ನುಗ್ಗಿ, ಕಚೇರಿ ಮುಚ್ಚುವಂತೆ ಒತ್ತಾಯಿಸಿರುವುದಲ್ಲದೆ, ಬಲಪ್ರಯೋಗಿಸಿ ಅವರನ್ನು ಹೊರದಬ್ಬುವ ಯತ್ನ ನಡೆಸಿದ್ದಾರೆ. ಇಂತಹ ಕ್ರಮವನ್ನು ಎನ್‌ಜಿಒ ಸಂಘಟನೆ ಪ್ರಬಲವಾಗಿ ವಿರೋಧಿಸಲಿದೆ ಎಂದು ಎನ್‌ಜಿಒ ಸಂಘ್ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ಸಭೆಗೆ ಸಂಘಟನೆ ಜಿಲ್ಲಾಧ್ಯಕ್ಷ ರಂಜಿತ್ ಕೆ., ಪೀತಾಂಬರನ್, ಸುನೀಲ್ ಕುಮಾರ, ರವಿ ಕೊಟ್ಟೋಡಿ, ಸಂತೋಷ್ ವಿ.ಕೆ. ಮೊದಲಾದವರಿದ್ದರು.