

ಸುಳ್ಯ: ಆಭರಣ ಪ್ರಿಯರಿಗೆ ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಗಾಗಿ ಹೊಸ ಮಳಿಗೆ ಸ್ವರ್ಣಂ ಜುವೆಲ್ಸ್ ಸೋಮವಾರ ಶುಭಾರಂಭಗೊಂಡಿತು. ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಸುಂತೋಡು ಎಂಪೋರಿಯಂನಲ್ಲಿ ನೂತನ ಚಿನ್ನಾಭರಣಗಳ ಮಳಿಗೆ ಕಾರ್ಯಾರಂಭಗೊಂಡಿತು. ಉದ್ಯಮಿ ಕೇಶವ ಪ್ರಸಾದ್ ಮುಳಿಯ, ಕೃಷ್ಣನಾರಾಯಣ ಮುಳಿಯ ಹೊಸ ಮಳಿಗೆ ಉದ್ಘಾಟಿಸಿ ಶುಭ ಹಾರೈಸಿದರು.
ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಅವರು ಡೈಮಂಡ್ ಕೌಂಟರ್ ಉದ್ಘಾಟಿಸಿದರು.ಉದ್ಯಮಿ ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟಿಸಿದರು. ಕೃಷ್ಣವೇಣಿ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಶ್ರಮಿಕಾ ಸುಂತೋಡು ಅವರು ಸ್ವರ್ಣಂ ಸ್ಪೆಷಲ್ ಆಭರಣಗಳನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್, ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನಪಂ ಸದಸ್ಯ ಎಂ.ವೆಂಕಪ್ಪ ಗೌಡ, ಡಾ.ರೇವಂತ್ ಭಾಗವಹಿಸಿದ್ದರು. ಸಂಸ್ಥೆ ಪಾಲುದಾರರಾದ ಪ್ರವೀಣ್ ಬಿ.ಗೌಡ, ಸಂಜೀವ ಕೆ, ಭವಿತ್ ಯು. ಹಾಗು ಲೋಕೇಶ್ ಎಂ.ಎಸ್., ಅಶ್ವಿನಿ, ಷಡಾಕ್ಷರಿ, ಗೀತಾ, ಸ್ವಾತಿ ಉಪಸ್ಥಿತರಿದ್ದರು. ಪಾಲುದಾರ ಸಂಜೀವ ಕೆ. ಸ್ವಾಗತಿಸಿದರು. ಪ್ರವೀಣ್ ಬಿ.ಗೌಡ ವಂದಿಸಿದರು. ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.
ವಿಶೇಷ ಕೊಡುಗೆ
ಗ್ರಾಹಕರ ಸೇವೆಯಲ್ಲಿ, ಚಿನ್ನ ಉದ್ಯಮದಲ್ಲಿ 20 ವರ್ಷಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವವರ ಪಾಲುದಾರರೊಂದಿಗೆ ಕಾರ್ಯಾರಂಭ ಮಾಡಿರುವ ಸ್ವರ್ಣಂ ಜುವೆಲ್ಸ್ ಉದ್ಘಾಟನೆ ಪ್ರಯುಕ್ತ ವಿಶೇಷ ಆಫರ್, ಕೊಡುಗೆ ನೀಡುತ್ತಿದೆ. ನಗುಮೊಗದ ಸರ್ವೀಸ್, ಆರ್ಡರ್ ಸ್ಪೆಷಲಿಸ್ಟ್, ಗೋಲ್ಡ್ ಟೆಸ್ಟ್ ಮಷಿನ್, ಉಚಿತ ಆಭರಣ ಸರ್ವೀಸ್, ಡೋರ್ ಡೆಲಿವರಿ, ತುರ್ತು ಸಮಯದಲ್ಲಿ ಗ್ರಾಹಕರ ಮನಸಿಗೆ ಒಪ್ಪುವ ಚಿನ್ನಾಭರಣಗಳನ್ನು ವಿಶೇಷ ವಿನ್ಯಾಸಗಳೊಂದಿಗೆ ತಯಾರಿಸಿಕೊಡಲಾಗುತ್ತದೆ.
12,000 ರೂ.ಗೆ ಚಿನ್ನದ ನೆಕ್ಲೇಸ್
ಮಹಿಳೆಯರು ಇಚ್ಛಿಸುವಂತಹ ನೂತನ ಶೈಲಿಯ 15ಕ್ಕೂ ಹೆಚ್ಚು ಕಲರ್ ಮ್ಯಾಚಿಂಗ್ ಚಿನ್ನದ ನೆಕ್ಲೇಸ್ಗಳು ಇದೀಗ ಸ್ವರ್ಣಂ ಜುವೆಲ್ಸ್ನಲ್ಲಿ ಲಭ್ಯವಿದೆ. 12000ರೂ.ಒಳಗೆ ಖರೀದಿಸಬಹುದು. ಚಿನ್ನ, ಬೆಳ್ಳಿ, ವಜ್ರ ಖರೀದಿಗೆ ಗ್ರಾಹಕರಿಗೆ ವಿಶೇಷ ಉಡುಗೊರೆ ಕೊಡಲಾಗುವುದು. ಗ್ರಾಹಕರು ನೂತನ ಮಳಿಗೆಗೆ ಭೇಟಿ ನೀಡಿ ವ್ಯಾಪಕ ಶ್ರೇಣಿಯ ಆಭರಣಗಳ ಸಂಗ್ರಹ ವೀಕ್ಷಿಸಬಹುದು.