ಬ್ರಹ್ಮಾವರ ಪ್ರದೇಶದಲ್ಲಿ ಸುಂಟರಗಾಳಿ ಸಹಿತ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹ ಭೀತಿ

bolla
ರಸ್ತೆ ಬದಿ ಮರಗಳು ವಿದ್ಯುತ್ ಕಂಬಗಳು ಗಾಳಿ ಮಳೆ ರಭಸಕ್ಕೆ ಮುರಿದು ಬಿದ್ದಿರುವುದು
Published on

ಬ್ರಹ್ಮಾವರ: ಕಳೆದ 2 ದಿನದಿಂದ ಸುಂಟರಗಾಳಿ ಸಹಿತ ಸುರಿಯುತ್ತಿರುವ ಭಾರಿ ಮಳೆಗೆ ಕರಾವಳಿ ಜಿಲ್ಲೆ ತತ್ತರಿಸಿ ಇದೀಗ ಇಲ್ಲಿನ ಜೀವ ನದಿಗಳು ತುಂಬಿ ಹರಿದು ಭಾರಿ ಪ್ರವಾಹದ ಬೀತಿ ಎದುರಾಗುತ್ತಿದೆ. ನದಿ ತೀರಪ್ರದೇಶವಾದ ಉಪ್ಪೂರು, ಬಾರಕೂರು, ಕಚ್ಚೂರು, ಮಟಪಾಡಿ, ಹಂದಾಡಿ, ನೀಲಾವರ ಭಾಗದ ಕುದ್ರು ಪ್ರದೇಶ ಮತ್ತು ತಗ್ಗು ಪ್ರದೇಶ ಸಂಪೂರ್ಣ ಜಲಾವೃತಗೊಂಡು ಸೀತಾ ಸ್ವರ್ಣಾ ಮತ್ತು ಮಡಿಸಾಲುಹೊಳೆ ತುಂಬಿ ಹರಿದು ನದಿ ತೀರದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ.

ಕೆಲ ಭಾಗದಲ್ಲಿ ರಸ್ತೆ ಬದಿ ಮರಗಳು ವಿದ್ಯುತ್ ಕಂಬಗಳು ಗಾಳಿ ಮಳೆ ರಭಸಕ್ಕೆ ಮುರಿದು ಅನೇಕ ಕಡೆಯಲ್ಲಿ ಕಳೆದ 2 ದಿನದಿಂದ ವಿದ್ಯುತ್ ಕಣ್ಣುಮುಚ್ಚಾಲೆ ಆಡುತ್ತಿದ್ದು ವಾಣಿಜ್ಯ ವ್ಯವಹಾರ ಸ್ಥಗಿತಗೊಂಡಿದೆ. ಭತ್ತದ ನಾಟಿ ಮಾಡುವ ಕೃಷಿಕರು ನೀರು ತುಂಬಿದ ಗದ್ದೆಯಲ್ಲಿ ನಾಟಿ ಮಾಡಲಾಗದೆ 2 ದಿನದಿಂದ ಕೃಷಿನಾಟಿಯಂತ್ರ ಉಳುಮೆ ಯಂತ್ರ ಗದ್ದೆಗೆ ಇಳಿದಿಲ್ಲ. ತಗ್ಗು ಪ್ರದೇಶದಲ್ಲಿ ಭತ್ತದ ಸಸಿಮಾಡಿದ ಅನೇಕ ರೈತರ ಸಸಿಗಳು ಪ್ರವಾಹದಲ್ಲಿ ಕೊಚ್ಚಿಹೋದ ಘಟನೆ ಸಂಭವಿಸಿದ್ದು, ನದಿ ನೀರಿನ ರಭಸ ಹೆಚ್ಚುತ್ತಲೆ ಇದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net