More

    ಒಂದೇ ದಿನಕ್ಕೆ 3 ಕೋಟಿ ಬಳಕೆದಾರರನ್ನು ಆಕರ್ಷಿಸಿದ ಥ್ರೆಡ್ಸ್​!

    ನವದೆಹಲಿ: ಥ್ರೆಡ್ಸ್​, ಮೆಟಾ ಆರಂಭಿಸಿದ ಹೊಸ ಸಾಮಾಜಿಕ ಪ್ಲಾಟ್‌ಫಾರ್ಮ್, ಎಲಾನ್ ಮಸ್ಕ್ ಟ್ವಿಟರ್‌ಗೆ ಪೈಪೋಟಿ ನೀಡುತ್ತಿದೆ. Instagramನ ಬ್ರ್ಯಾಂಡಿಂಗ್ ಹಾಗೂ ರಚನೆಯೊಂದಿಗೆ, ಥ್ರೆಡ್ಸ್​ ಬಳಕೆದಾರರಿಗೆ ಸುಲಭವಾಗಿ ಲಾಗ್ ಇನ್ ಮಾಡಲು, ಸ್ನೇಹಿತರನ್ನು ಹುಡುಕಲು ಮತ್ತು ಅವರ ಸಂಪರ್ಕ ಸಾಧಿಸಲು ಅನುಮತಿಸುತ್ತದೆ. ಮೊದಲ ದಿನವೇ 30 ಮಿಲಿಯನ್ ಅಂದರೆ 3 ಕೋಟಿ ಬಳಕೆದಾರರು ಥ್ರೆಡ್ಸ್​ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

    ಇದನ್ನೂ ಓದಿ: Twitter vs Threads; ಥ್ರೆಡ್ಸ್​ನಲ್ಲಿ ಒಮ್ಮೆ ಲಾಗಿನ್​ ಮಾಡಿದರೆ ಡಿಲೀಟ್ ಮಾಡುವುದು ಅಸಾಧ್ಯ ​

    ಪಠ್ಯ-ಆಧಾರಿತ ಚಾಟ್ ಅಪ್ಲಿಕೇಶನ್ ಎಂದೇ ಕರೆಯಲ್ಪಡುತ್ತಿರುವ ಥ್ರೆಡ್ಸ್​, ಟ್ರೆಂಡಿಂಗ್​ ವಿಷಯಗಳ ಬಗ್ಗೆ ಮಾತನಾಡಲು ವೇದಿಕೆಯನ್ನು ನೀಡುತ್ತದೆ. ಬಳಕೆದಾರರು ತಮ್ಮ ನೆಚ್ಚಿನ ಕ್ರಿಯೇಟರ್​​ಗಳನ್ನು ಇಲ್ಲಿ ಅನುಸರಿಸಬಹುದಾಗಿದ್ದು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಬಹುದು. ಈ ಮೂಲಕ ಟ್ವಿಟರ್​ನಲ್ಲಿ ಮಾಡಿದಂತೆಯೇ ಅವರ ಆಲೋಚನೆಗಳು, ಅಭಿಪ್ರಾಯಗಳು ಮತ್ತು ಸೃಜನಶೀಲತೆಯನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಬಹುದು.

    ಇದನ್ನೂ ಓದಿ: ಥ್ರೆಡ್ಸ್​ ಆ್ಯಪ್​ ನಾಗಾಲೋಟಕ್ಕೆ ಬೆಚ್ಚಿಬಿದ್ರಾ ಎಲನ್​ ಮಸ್ಕ್​? ಮೆಟಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ

    ಪ್ರಸ್ತುತ ಟ್ವಿಟರ್​ನಲ್ಲಿ 450 ಮಿಲಿಯನ್​ ಅಂದರೆ 45 ಕೋಟಿ ಬಳಕೆದಾರರನ್ನು ಹೊಂದಿದೆ. ಒಂದೇ ದಿನಕ್ಕೆ ಥ್ರೆಡ್ಸ್​ನಲ್ಲಿ 3 ಕೋಟಿ ಜನರು ನೊಂದಾಯಿಸಿಕೊಂಡಿದ್ದು ನೋಂದಣಿದಾರರ ಸಂಖ್ಯೆ ಇನ್ನು ಕೆಲವೇ ದಿನಗಳಲ್ಲಿ ಹೆಚ್ಚಾಗಲಿದೆ. ಆದರೆ ಕೆಲ ದಿನಗಳ ನಂತರ ಟ್ರೆಂಡ್​ ಇಳಿದಂತೆಯೇ ನಿತ್ಯವೂ ಎಷ್ಟು ಜನರು ಹೊಸ ಮಾಧ್ಯಮವನ್ನು ಬಳಸಲಿದ್ದಾರೆ ಎನ್ನುವುದರ ಆಧಾರದ ಮೇಲೆ ಥ್ರೆಡ್ಸ್​, ಟ್ವಿಟರ್​ಅನ್ನು ಮುಳುಗಿಸುತ್ತಾ ಇಲ್ಲವೇ ಎನ್ನುವುದು ತಿಳಿದುಬರಲಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts