ಸೆ.30ಕ್ಕೆ ತೋತಾಪುರಿ; ಮಾರ್ಟಿನ್, ಕಾಂತಾರ ಜತೆಗೆ ಆಗಮನ

Thothapuri
Published on

ಜಗ್ಗೇಶ್ ಅಭಿನಯದ ‘ತೋತಾಪುರಿ’ ಚಿತ್ರದ ಬಿಡುಗಡೆ ದಿನಾಂಕವನ್ನು ಕೊನೆಗೂ ಘೋಷಿಸಲಾಗಿದೆ. ಚಿತ್ರವು ದಸರಾ ಪ್ರಯುಕ್ತ ಸೆ. 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಜಯಪ್ರಸಾದ್ ನಿರ್ದೇಶನದ ‘ತೋತಾಪುರಿ’ ಚಿತ್ರದ ಕೆಲಸಗಳು ಮುಗಿದು, ಟ್ರೇಲರ್ ಬಿಡುಗಡೆಯಾಗಿ ಕೆಲ ಸಮಯವೇ ಆಗಿದೆ. ಆದರೆ, ಚಿತ್ರತಂಡ ಮಾತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿರಲಿಲ್ಲ.

ಯಾವಾಗ ‘ತೋತಾಪುರಿ’ಯ ಬಿಡುಗಡೆ ತಡವಾಗುತ್ತಾ ಹೋಯಿತೋ, ಆಗ ‘ರಾಘವೇಂದ್ರ ಸ್ಟೋರ್ಸ್’ನ ಬಿಡುಗಡೆ ಘೋಷಣೆಯಾಯಿತು. ಆ ಚಿತ್ರವು ಆಗಸ್ಟ್ 05ಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಅದಾಗಿ 50 ದಿನಗಳ ನಂತರ ‘ತೋತಾಪುರಿ’ ಬಿಡುಗಡೆಯಾಗಲಿದೆ. ವಿಶೇಷವೆಂದರೆ, ಈಗಾಗಲೇ ಅದೇ ದಿನದಂದು ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಮತ್ತು ರಿಷಬ್ ಶೆಟ್ಟಿ ಅಭಿನಯಿಸಿ ನಿರ್ದೇ ಶಿಸಿರುವ ‘ಕಾಂತಾರ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈಗ ಆ ಸಾಲಿಗೆ ‘ತೋತಾಪುರಿ’ ಸಹ ಸೇರ್ಪಡೆಯಾಗಲಿದೆ.

ದಸರಾ ಹಬ್ಬದ ರಜೆಗಳು ಇರುವ ಕಾರಣ, ಆ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ತೀರ್ವನಿಸಿದೆ ಎಂದು ನಿರ್ವಪಕ ಸುರೇಶ್ ಹೇಳಿದ್ದಾರೆ. ‘ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್ ಜತೆಗೆ ಅದಿತಿ ಪ್ರಭುದೇವ, ಧನಂಜಯ, ಸುಮನ್ ರಂಗನಾಥ್, ದತ್ತಣ್ಣ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net