ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು

hbr
Published on

ಹೆಬ್ರಿ: ಇತಿಹಾಸವನ್ನು ಮರೆತವರು, ಇತಿಹಾಸ ಸೃಷ್ಟಿಸಲಾರರು ಎಂಬ ಅಂಬೇಡ್ಕರ್ ವಾತಿನಂತೆ ಸ್ವಾತಂತ್ರ್ಯ ಪಡೆಯಲು ಅನೇಕ ಮಹನೀಯರು ಪ್ರಾಣ ತ್ಯಾಗ ವಾಡಿದ್ದಾರೆ. ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್ ಹೇಳಿದರು.

ಹೆಬ್ರಿ ತಾಲೂಕು ಆಡಳಿತ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ವಾತನಾಡಿದರು. ಪಥಸಂಚಲನದ ನೇತೃತ್ವವನ್ನು ಹೆಬ್ರಿ ಪಿಎಸ್‌ಐ ರವಿ ಬಿ.ಕೆ. ವಹಿಸಿದ್ದರು. ಹೆಬ್ರಿ ಗ್ರಾಪಂ ಅಧ್ಯಕ್ಷ ತಾರಾನಾಥ ಬಂಗೇರ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.

ಹೆಬ್ರಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ್ ಶೇರಿಗಾರ್, ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ, ಉಮೇಶ್, ಉಪ ಪ್ರಾಂಶುಪಾಲ ದಿವಾಕರ ಮರಕಾಲ, ಉಡುಪಿ ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಟಿಪಿಒ ರವಿಚಂದ್ರ ಕಾರಂತ್, ಧಾರ್ಮಿಕ ಮುಂದಾಳು ಹೆಬ್ರಿ ಭಾಸ್ಕರ್ ಜೋಯಿಸ್, ನಿವೃತ್ತ ಪ್ರಾಂಶುಪಾಲ ವಾಸುದೇವ ಭಟ್, ಪಿಎಎಸ್‌ಐ ಮಹಾಂತೇಶ್ ಜಾಬಗೌಡ, ಉದ್ಯಮಿ ಯೋಗಿಶ್ ಭಟ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂ ಅಧ್ಯಕ್ಷ ನವೀನ್ ಕೆ.ಅಡ್ಯಂತಾಯ ಇದ್ದರು.

ಸಾಧಕ ವಿದ್ಯಾರ್ಥಿಗಳಾದ ಕಿರಲಿಂಗ ಸ್ವಾಮಿ, ಪೂರ್ವಿ ಎಂ.ರಾವ್, ಪ್ರೀತಿ, ಅನನ್ಯಾ ಕಾಮತ್, ಚಿರಂತನ್ ಅವರನ್ನು ಸನ್ಮಾನಿಸಲಾಯಿತು. ದಿವಾಕರ ಮರಕಾಲ ಸ್ವಾಗತಿಸಿದರು. ವೆಂಕಟರಮಣ ಕಲ್ಕೂರ ವಂದಿಸಿದರು. ಪ್ರವೀಣ್‌ಕುವಾರ್ ಶೆಟ್ಟಿ, ಪ್ರಕಾಶ್ ಪೂಜಾರಿ, ಮಂಜುನಾಥ್ ಕುಲಾಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net