ನನ್ನ ಜೀವನದ ಸತ್ಯಕಥೆ ಗೊತ್ತಿಲ್ಲದವರು ನನ್ನನು ವಿನಾಕಾರಣ ದೂಷಿಸಿದರು; ಪವಿತ್ರಾಗೌಡ| Pavitragowda

pavithragowda
Published on

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವು ಮಂದಿ ಜೈಲು ಶಿಕ್ಷೆ ಅನುಭವಿಸಿ ಜಾಮೀನು ಪಡೆದು ಹೊರಗಡೆ ಬಂದಿದ್ದಾರೆ. ಜೈಲಿನಿಂದ ಬಿಡುಗಡೆಯಾದ ನಂತರ ಪವಿತ್ರಾ ಗೌಡ ಯಾವುದೇ ವಿಚಾರಕ್ಕೂ ಕೂಡ ಪ್ರತಿಕ್ರಿಯೆ ನೀಡದೆ, ತನ್ನ ಪಾಡಿಗೆ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ. ಕೆಲವು ದೇವಸ್ಥಾನಗಳ ಭೇಟಿಯ ಬಳಿಕ ತನ್ನ ತಾಯಿ, ಮಗಳ ಜತೆ ದಿನ ಕಳೆಯುತ್ತಾ, ರೆಡ್ ಕಾರ್ಪೆಟ್ ಸ್ಟುಡಿಯೋದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಇದೀಗ ಮೊದಲ ಬಾರಿಗೆ ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ತಮ್ಮ ಜೀವನದ ಸತ್ಯಕಥೆ ಗೊತ್ತಿಲ್ಲದ ಬಹಳ ಜನ ನನ್ನನು ವಿನಾಕಾರಣ ದೂಷಿಸಿದರು ಎಂದು ಬರೆದಿದ್ದಾರೆ.

ಹಿರಿಯ ವಿಮರ್ಶಕಿ ಡಾ. ಎಂ. ಎಸ್ ಆಶಾದೇವಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಡಿಯೋ ಕ್ಲಿಪ್‌ ವೊಂದನ್ನು ಹಂಚಿಕೊಂಡಿರುವ ಪವಿತ್ರಾ ಗೌಡ, ನನ್ನ ಜೀವನದ ಸತ್ಯಕಥೆ ಗೊತ್ತಿಲ್ಲದ ಬಹಳ ಜನ ನನ್ನನು ವಿನಾಕಾರಣ ದೂಷಿಸಿದರು ಇಂತಹ ಸಮಾಜದಲ್ಲಿ ನಿಮ್ಮ ಈ ಮಾತುಗಳು ನನ್ನಲ್ಲಿ ಒಂದು ಸಣ್ಣ ಬರವಸೆ ಚಿಗುರಿಸಿದೆ. ನನ್ನ ಕಡೆಯಿಂದ ಅನಂತ ಧನ್ಯವಾದಗಳು. ನನ್ನ ಜೀವನದ ಸತ್ಯಾಸತ್ಯತೆಗಳನ್ನು ಅರಿತುಕೊಳ್ಳದೆ ನನ್ನ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡುವ ಇಂತಹ ಸಮಾಜದಲ್ಲಿ ನಿಮ್ಮಂಥವರು ಇರುವುದು ಬಹಳ ವಿಶೇಷ ಎಂದು ಬರೆದಿದ್ದಾರೆ.

(ಏಜೆನ್ಸೀಸ್)

ಡಾ. ಎಂ. ಎಸ್ ಆಶಾದೇವಿ ಮಾಧ್ಯಮ ಸಲಹೆಗಾರರಿದ್ದಾರೆ. ನಾನು ಹೇಳಬೇಕು, ನಾನು ಅಂದರೆ ಯಾವುದೇ ವಿಷಯ ಆಗಿರಲಿ ಆಕೆ ಒಬ್ಬ ನಟಿಯಾಗಿರಲಿ. ಆಕೆ ಇನ್ಯಾರನ್ನೋ ಮದುವೆ ಮಾಡಿಕೊಳ್ಳುತ್ತಾಳೆ. ಅದರಲ್ಲಿ ನಿಮಗೇನು ಸಮಸ್ಯೆಯಿದೆ, ನನ್ ಆಫ್ ಯುವರ್ ಬ್ಯುಸಿನೆಸ್ ಅಲ್ವಾ, ಒಬ್ಬ ಪವಿತ್ರ ಎನ್ನುವ ಹೆಣ್ಣುಮಗಳ ವಿಷಯದಲ್ಲಿ ಅಪವಿತ್ರ ಅಂತ ಬಳಸಿದ್ದು ಎಷ್ಟು ಸರಿ, ಹೆಣ್ಣಿಗೆ ಬಳಸುವ ಭಾಷೆಯಾ ಇದು ಎಂದು ಆಶಾದೇವಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net