ಕಸ್ಟಡಿಯಲ್ಲಿರುವ ಹಾಗೂ ಹೊರಗಿದ್ದು ತನಿಖೆ ಎದುರಿಸುವವರಿಗೆ ಚುನಾವಣೆ ಸ್ಪರ್ಧಿಸದಂತೆ ನಿರ್ಬಂಧ ಅಗತ್ಯ: Supreme Court​

dk (71)
Published on

ದೆಹಲಿ:ನಮ್ಮ ಪ್ರಜೆಗಳು ಸ್ವಚ್ಛ ಭಾರತ ನಿರ್ಮಾಣಕ್ಕೆ ಅರ್ಹರು ಹೀಗಾಗಿ, ಸ್ವಚ್ಛ ರಾಜಕೀಯವೂ ಸಹ ನಿರ್ಮಾಣ ಮಾಡಬೇಕು. ಈ ಉದ್ದೇಶಕ್ಕಾಗಿ ಕಳಂಕಿತ ಇಮೇಜ್ ಹೊಂದಿರುವ ಜನರು, ವಿಶೇಷವಾಗಿ ಯಾರು ಕಸ್ಟಡಿಯಲ್ಲಿರುವರು, ಯಾರಿಗೆ ಜಾಮೀನು ನೀಡಿಲ್ಲ ಮತ್ತು ಜೈಲಿನಿಂದ ಹೊರಗಿದ್ದರೂ ಸಹ ವಿಚಾರಣೆಗೆ ಒಳಪಡುವವರನ್ನು ಚುನಾವಣೆಯಲ್ಲಿ ಭಾಗವಹಿಸದಂತೆ ಯಾವುದಾದರೂ ರೀತಿಯಲ್ಲಿ ನಿರ್ಬಂಧಿಸಬೇಕು ಎಂದು ಸುಪ್ರೀಂಕೋರ್ಟ್(Supreme Court)​ ಹೇಳಿದೆ.

ದೆಹಲಿಯ ಗಲಭೆಗಳ ಆರೋಪಿ ಮತ್ತು ಎಐಎಂಐಎಂ ಅಭ್ಯರ್ಥಿ ತಾಹೀರ್​ ಹುಸೇನ್​ ಎಂಬುವವರು 'ದೆಹಲಿ ಚುನಾವಣೆ ಹಿನ್ನೆಲೆ ಪ್ರಚಾರ ಮಾಡುವ ಸಲುವಾಗಿ ಮಧ್ಯಂತರ ಜಾಮೀನು ನೀಡುವಂತೆ' ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಮೀಥಲ್​​ ಇದ್ದ ನ್ಯಾಯಪೀಠ ಗುರುವಾರ ವಜಾಗೊಳಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರಚಾರಕ್ಕಾಗಿ ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಅಥವಾ ಬೆದರಿಕೆ ಹಾಕಲು ಪ್ರಯತ್ನಿಸುವುದರೊಂದಿಗೆ ಹುಸೇನ್ ವಿರುದ್ಧದ ಪ್ರಕರಣದ ವಿಚಾರಣೆಯ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಪೀಠ ಹೇಳಿದೆ.

"ಚುನಾವಣೆಯಲ್ಲಿ ಪ್ರಚಾರವನ್ನು ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು, ಕರಪತ್ರಗಳ ಮೂಲಕ ಹಲವಾರು ರೀತಿಯಲ್ಲಿ ಮಾಡಬಹುದು.ಸಭೆಗಳನ್ನು ನಡೆಸುವ ಮೂಲಕ ಮತ್ತು ವೈಯಕ್ತಿಕ ಸಂಪರ್ಕದ ಮೂಲಕ ಭೌತಿಕ ರೂಪದಲ್ಲಿರುವುದು ಅನಿವಾರ್ಯವಲ್ಲ'' ಎಂದು ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net