

ಮೂಲ್ಕಿ: ಭಾರತೀಯ ಸೇವಾ ಪಡೆಗೆ ಸೇರುವ ಮೂಲಕ ಶಿಸ್ತು, ಸಂಯಮ, ಏಕಾಗ್ರತೆ ಜತೆಗೆ ಕಷ್ಟ ಎದುರಿಸುವ ತರಬೇತಿ ಲಭ್ಯವಾಗುತ್ತದೆ. ಜೀವನದಲ್ಲಿ ಗೌರವ ಹಾಗೂ ಆರ್ಥಿಕ ಉನ್ನತಿ ಗಳಿಸಲು ಸಾಧ್ಯ ಎಂದು ವಿಶ್ರಾಂತ ಯೋಧ ದಿಲೀಪ್ ವಿ.ಕರ್ಕೇರ ಹೇಳಿದರು.
ತೋಕೂರು ಯುವಕ ಸಂಘ ಮಹಿಳಾ ಮಂಡಲ ಹಾಗೂ ರೋಟರಿ ಸಮುದಾಯ ದಳ ಸಂಯುಕ್ತ ಆಶ್ರಯದಲ್ಲಿ ಭಾರತೀಯ ಭೂಸೇನೆಯ ಗೌರವ ಸ್ವೀಕರಿಸಿ ಮಾತನಾಡಿದರು.
ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ರೊ.ಜೇಮ್ಸ್ ಪೀಟರ್ ಡಿ ಸೋಜ ಅಧ್ಯಕ್ಷತೆ ವಹಿಸಿದ್ದರು. ತೋಕೂರು ರೋಟರಿ ಸಮುದಾಯ ದಳ ಅಧ್ಯಕ್ಷ ಪರಮೇಶ್ವರ ಶೆಟ್ಟಿಗಾರ್, ಯುವಕ ಸಂಘ ಅಧ್ಯಕ್ಷ ವಾಮನ ಎಸ್.ದೇವಾಡಿಗ, ಮಹಿಳಾ ಮಂಡಲ ಅಧ್ಯಕ್ಷೆ ಪ್ರಪುಲ್ಲಾ ಆರ್.ಶೆಟ್ಟಿ, ಹರಿದಾಸ್ ಭಟ್ ಉಪಸ್ಥಿತರಿದ್ದರು.