

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪೆರಿಯ ಕ್ಯಾಂಪಸ್‌ನಲ್ಲಿ ನಿರ್ಮಿಸಲಾಗಿರುವ ವಿವಿಧ ರೀತಿಯ ಪಾಪಾಸ್‌ಕಳ್ಳಿಗಳ ಸಸ್ಯೋದ್ಯಾನವನ್ನು ಕುಲಪತಿ ಪ್ರೊ.ಸಿದ್ದು ಪಿ.ಅಲ್ಗೂರ್ ಉದ್ಘಾಟಿಸಿದರು.
ವಿಶ್ವವಿದ್ಯಾಲಯದ ಸಸ್ಯೋದ್ಯಾನ ಮತ್ತು ಸಂಶೋಧನಾ ಕೇಂದ್ರ (ಕೆಬಿಜಿಆರ್‌ಸಿ) ವತಿಯಿಂದ ಮೂವತ್ತಕ್ಕೂ ಹೆಚ್ಚು ತಳಿಗಳ ಪಾಪಾಸ್‌ಕಳ್ಳಿಗಳನ್ನು ಉದ್ಯಾನದಲ್ಲಿ ನೆಡಲಾಗಿದ್ದು, ಭಾರತ ಸಹಿತ ಮೆಕ್ಸಿಕೊ, ಸೌದಿ ಅರೇಬಿಯಾ ಮತ್ತು ಮಧ್ಯ ಆಫ್ರಿಕಾದ ದೇಶದ ಪ್ರಮುಖ ತಳಿಗಳು ಇಲ್ಲಿವೆ. ಜತೆಗೆ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣದಿಂದಲೂ ಪಾಪಾಸ್‌ಕಳ್ಳಿ ತರಿಸಲಾಗಿದೆ.
ಜೈವಿಕ ವಿಜ್ಞಾನದ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಪ್ರಭಾರ ಕುಲಸಚಿವ ಡಾ.ಆರ್.ಜಯಪ್ರಕಾಶ್, ಸಸ್ಯ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ಕೆ.ಅರುಣ್ ಕುಮಾರ್, ಕೆಬಿಜಿಆರ್‌ಸಿ ಜಂಟಿ ನಿರ್ದೇಶಕ ಡಾ.ಎಂ.ಜಾಸ್ಮಿನ್ ಶಾ, ಡಾ.ಪ್ರಮೋದ್ ಕೆ. ಕಂಡೋತ್, ಡಾ.ಜಿನ್ನಿ ಆಂಟನಿ, ಡಾ. ಅಜಯ್ ಕುಮಾರ್, ಡಾ.ಚಿತ್ರಾ ಮಣಿಶ್ಶೇರಿ ಉಪಸ್ಥಿತರಿದ್ದರು.