VIDEO| ನೈಲ್​ ನದಿಯ ಹಿಪ್ಪೋಗಳನ್ನು ನೆನಪಿಸುವ ಆನೆಗಳ ಹಿಂಡು

elephant may
Published on

ಆನೆಯ ಹಿಂಡು ನದಿಯಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಆನೆಗಳ ದೊಡ್ಡ ಹಿಂಡು ನದಿಯಲ್ಲಿ ಸ್ನಾನ ಮಾಡುತ್ತಿವೆ. ಹಿಂಡಿನಲ್ಲಿ ಇರುವ ಮರಿ ಆನೆಗಳು ಎಲ್ಲರ ಗಮನ ಸೆಳೆಯುತ್ತವೆ. ಹೀಗಾಗಿ ಈ ದೃಶ್ಯ ಅಧಿಕವಾಗಿ ಪ್ರಸಾರವಾಗಿದೆ.

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವಿಟರ್‌ನಲ್ಲಿ 16 ಸೆಕೆಂಡುಗಳ ಕ್ಲಿಪ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅಪ್​ಲೋಡ್​ ಆದ ಕೆಲವೇ ತಾಸುಗಳಲ್ಲಿ 13 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ.

ಆನೆ ಕುಟುಂಬ ಒಟ್ಟಾಗಿ ಸ್ನಾನ ಮಾಡುತ್ತಿದೆ. ಸ್ನಾನ ಮಾಡುತ್ತಿರುವ ಆನೆಗಳನ್ನು ಎಣಿಸಬಹುದೆ? ಆನೆ ಹಿಂಡಿನಲ್ಲಿ ಮರಿ ಆನೆಗಳು ಇವೆ ಗಮನಿಸಿ. ನದಿ ನೀರಿನಲ್ಲಿ ಅವುಗಳು ವಿಹರಿಸುತ್ತಿವೆ ಎಂದು ವಿಡಿಯೋಗೆ ಶೀರ್ಷಿಕೆ ಬರೆದಿದ್ದಾರೆ.

ವಿಡಿಯೋ ನೋಡಿದ ಕೆಲವರು ಉತ್ತಮವಾದ ಪ್ರತಿಕ್ರಿಯೆ ನೀಡಿದ್ದಾರೆ. ಉಗಾಂಡಾದ ಮುರ್ಚಿಸನ್ ಜಲಪಾತದಲ್ಲಿ ಹಿಪ್ಪೋಗಳು ಅಲೆದಾಡುತ್ತಿರುವುದನ್ನು ನೆನಪಿಸುತ್ತದೆ. ಉತ್ತಮವಾದ ವಿಡಿಯೋ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net