ಇಡೀ ಊರಿಗೇ ಕೇಳಿಸುತ್ತಿತ್ತು ಈ ಮನುಷ್ಯನ ಗೊರಕೆ; ವಿಡಿಯೋ ಕೂಡ ವೈರಲ್​ ಆಯ್ತು..

Snoring
Published on

ನವದೆಹಲಿ: ಮನೆಯಲ್ಲಿ ಯಾರಾದರೂ ಗೊರಕೆ ಹೊಡೆಯುತ್ತಿದ್ದರೆ ಪಕ್ಕದಲ್ಲಿ ಮಲಗಿದ್ದವರಿಗಷ್ಟೇ ತೊಂದರೆ ಆಗುತ್ತದೆ. ಹೆಚ್ಚೆಂದರೆ ಪಕ್ಕದ ರೂಮ್​ನಲ್ಲಿದ್ದವರಿಗೂ ತೊಂದರೆ ಆಗಬಹುದು. ಆದರೆ ಇಲ್ಲೊಬ್ಬರು ಹೊಡೆದ ಗೊರಕೆ ಸುತ್ತಮುತ್ತಲಿನ ಮನೆಗಳವರನ್ನೆಲ್ಲ ಎಚ್ಚರಿಸಿದೆ.

ಇವರ ಗೊರಕೆ ಜನರನ್ನು ನಿದ್ರೆಯಿಂದ ಎಬ್ಬಿಸಿದ್ದಷ್ಟೇ ಅಲ್ಲ, ಆ ರಾತ್ರಿಯ ಮಟ್ಟಿಗೆ ಒಳ್ಳೆಯ ಟೈಮ್​ಪಾಸ್​ ಆಗಿಯೂ ಪರಿಣಮಿಸಿದೆ. ಈ ಗೊರಕೆಯನ್ನು ಕೇಳಿ ಜನ ನಗಲಾರಂಭಿಸಿದ್ದು, ಕೆಲವರಿಗಂತೂ ತಕ್ಷಣಕ್ಕೆ ಒಮ್ಮೆ ವಿಚಿತ್ರವಾಗಿ ಕಾಣಿಸಿದ್ದೂ ಹೌದು.

ಅಂದಹಾಗೆ ಇದು ಮೌಲ್ವಿಯೊಬ್ಬರು ಎಂದಿನಂತೆ ಧಾರ್ಮಿಕ ಕಾರ್ಯಕ್ರಮದ ಬಳಿಕ ಮೈಕ್ ಆಫ್ ಮಾಡಲು ಮರೆತು ನಿದ್ರೆ ಹೋಗಿದ್ದರಿಂದ ಹೀಗಾಗಿದೆ ಎನ್ನಲಾಗಿದೆ. ಇದು ಎಲ್ಲಿ-ಯಾವಾಗ ನಡೆದಿದ್ದು ಎಂಬ ಸ್ಪಷ್ಟ ಮಾಹಿತಿ ಲಭ್ಯವಿಲ್ಲವಾದರೂ ಈ ವಿಡಿಯೋ ವೈರಲ್​ ಆಗಿದ್ದು, ಜನರಿಗೆ ಮನರಂಜನೆಯ ವಿಡಿಯೋ ತುಣುಕಾಗಿಯೂ ಪರಿಣಮಿಸಿದೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net