ಈತ ಆಟೋದಲ್ಲಿ ಬರ್ತಾನೆ, ಸೈಕಲ್​ನಲ್ಲಿ ಹೋಗ್ತಾನೆ!; ಇವನೊಬ್ಬ ದುಬಾರಿ 'ಬೈಸಿಕಳ್ಳ'

F
Published on

ಬೆಂಗಳೂರು: ಕಳ್ಳರೇ ಹಾಗೇ.. ಹೇಗೋ ಬಂದು ಹೇಗೋ ವಾಪಸ್ ಹೋಗಿ ಬಿಡುತ್ತಾರೆ. ಆದರೆ ಹತ್ತು ಬಾರಿ ಕದ್ದವ ಹನ್ನೊಂದನೇ ಸಲವಾದರೂ ಸಿಕ್ಕಿಬೀಳುತ್ತಾನೆ ಎಂಬಂತೆ ಈ ಖತರ್ನಾಕ್​ ಕಳ್ಳ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಸಂಜಯನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಈ 'ಬೈಸಿಕಳ್ಳ'ನ ಹೆಸರು ರಫೀಕ್​.

ಈ ಖತರ್ನಾಕ್​ ಕಳ್ಳ ಆಟೋದಲ್ಲಿ ಬರುತ್ತಾನೆ, ಹೋಗುವಾಗ ಸೈಕಲ್​ನಲ್ಲೇ ಹೋಗುತ್ತಾನೆ. ಈತನನ್ನು ಬೈಸಿಕಳ್ಳ ಎಂದರೂ ತಪ್ಪೇನಲ್ಲ. ಏಕೆಂದರೆ ದುಬಾರಿ ಬೈಸಿಕಲ್​ಗಳನ್ನೇ ಕದಿಯುವ ಈತನಿಂದ ಪೊಲೀಸರು 45 ಸೈಕಲ್​ಗಳನ್ನು ವಶಪಡಿಸಿಕೊಂಡಿದ್ದಾರೆ.

ರಸ್ತೆ ಬದಿಯಲ್ಲಿ ಅಥವಾ ಮನೆಯ ಆವರಣದಲ್ಲಿ ನಿಲ್ಲಿಸಿರುವ ದುಬಾರಿ ಸೈಕಲ್​ಗಳನ್ನು ಈತ ಕದಿಯುತ್ತಿದ್ದ. ಬಳಿಕ ಅದನ್ನು ಅರ್ಧದರಕ್ಕೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ. ಈತನಿಂದ ವಶಪಡಿಸಿಕೊಂಡಿರುವ ಸೈಕಲ್​ಗಳಲ್ಲಿ ಪ್ರತಿಯೊಂದೂ 20ರಿಂದ 40 ಸಾವಿರ ರೂ. ಮೌಲ್ಯದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net