More

    ಬೆಂಗಳೂರಿನಲ್ಲಿ ಲವ್ ಜಿಹಾದ್​?; ಪ್ರೀತಿಯ ಸೋಗಲ್ಲಿ ಈತ ಆಕೆಯನ್ನು ಬಲೆಗೆ ಬೀಳಿಸಿಕೊಂಡಿದ್ದು ಹೀಗೆ.. ಹುಷಾರು..!

    ಬೆಂಗಳೂರು: ಇದು ಸೋಷಿಯಲ್ ಮೀಡಿಯಾದಲ್ಲಿರುವ ಯುವತಿಯರು ಮತ್ತಷ್ಟು ಎಚ್ಚರಿಕೆಯಿಂದ ಇರುವಂತೆ ಎಚ್ಚರಿಸುವಂಥ ಒಂದು ಪ್ರಕರಣ. ಅಪರಿಚಿತನೊಬ್ಬ ದೂರದ ಪಶ್ಚಿಮಬಂಗಾಳದಲ್ಲಿನ ಯುವತಿಯೊಬ್ಬಳನ್ನು ತನ್ನ ನಾಟಕದ ಪ್ರೇಮದ ಬಲೆಗೆ ಬೀಳಿಸಿಕೊಂಡು ಬೆಂಗಳೂರಿಗೆ ಕರೆದುಕೊಂಡು ಬಂದು ಕೊನೆಗೂ ಪೊಲೀಸರ ವಶವಾಗಿದ್ದಾನೆ.

    ಪಶ್ಚಿಮಬಂಗಾಳದ ಯುವತಿಯೊಬ್ಬಳನ್ನು ಫೇಸ್​ಬುಕ್​ನಲ್ಲೇ ಪರಿಚಯ ಮಾಡಿಕೊಂಡು, ಪ್ರೀತಿಸುವ ನಾಟಕವಾಡಿ ತನ್ನ ಬಲೆಗೆ ಕೆಡವಿಕೊಂಡ ಸಮಾನುಲ್ಲಾ ಎಂಬಾತ, ಆಕೆಯನ್ನು ಅಲ್ಲಿಂದ ಕರೆದುಕೊಂಡು ಬಂದು ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿಯಲ್ಲಿ ರೂಮ್ ಮಾಡಿಕೊಂಡು ನೆಲೆಸಿದ್ದ.

    ಇದನ್ನೂ ಓದಿ: ಗಂಡ-ಹೆಂಡಿರಂತೆ ಇದ್ದ ಇಬ್ಬರು ‘ವಿವಾಹಿತರು’ ಮನೆಯಲ್ಲೇ ಹೆಣವಾದರು; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆಯೋ ಆತ್ಮಹತ್ಯೆಯೋ?!

    ಒಂದು ವಾರದ ಹಿಂದೆ ಈತ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಆಕೆ ನಾಪತ್ತೆ ಆಗಿರುವ ಕುರಿತು ದೂರು ದಾಖಲಾಗಿತ್ತು. ಇಲ್ಲಿ ಆಕೆಯನ್ನು ಮತಾಂತರಕ್ಕೆ ಒಳಗಾಗುವಂತೆ ಒತ್ತಾಯಿಸುತ್ತಿದ್ದ ಸಮಾನುಲ್ಲಾ, ಕೊನೆಗೆ ಹಿಂದೂಪರ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಯುವತಿಯನ್ನು ರಕ್ಷಿಸಿದ ಹಿಂದೂಪರ ಕಾರ್ಯಕರ್ತರು ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆಕೆಯ ಜೊತೆ ಆತನ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ತನಿಖೆಗೆ ಇಳಿದಿದ್ದಾರೆ.

    ಇದನ್ನೂ ಓದಿ: ಧಮ್ಕಿ ಹಾಕಿದ್ದ ಧರ್ಮೇಂದ್ರ ಅರೆಸ್ಟ್; ಗಾಂಧಿಯನ್ನೇ ಬಿಟ್ಟಿಲ್ಲ ಬೇರೆಯವರನ್ನು ಬಿಡ್ತೀವಾ ಅಂದಿದ್ಕೆ ಹಿಡ್ಕೊಂಡ್ರು ಪೊಲೀಸ್ರು..

    ಸಮಾನುಲ್ಲಾ ಆಕೆಯನ್ನು ಫೇಸ್​ಬುಕ್​ ಮೂಲಕ ಪರಿಚಯ ಮಾಡಿಕೊಂಡಿದ್ದ. ಹಿಂದೂ ಯುವಕನೊಬ್ಬನ ಹೆಸರಿನಲ್ಲಿ ಫೇಸ್​ಬುಕ್​ನಲ್ಲಿ ಫೇಕ್​ ಅಕೌಂಟ್ ಮಾಡಿಕೊಂಡಿದ್ದ ಈತ, ಆಕೆಯೊಂದಿಗೆ ಸಂಪರ್ಕ ಸಾಧಿಸಿ, ಸಲುಗೆ ಬೆಳೆಸಿಕೊಂಡು ಪ್ರೀತಿಯ ನಾಟಕವಾಡಿದ್ದಾನೆ. ಈತನ ಮೋಹದ ಪಾಶಕ್ಕೆ ಬಿದ್ದ ಅವಳು ಮನೆಬಿಟ್ಟು ಇವನೊಂದಿಗೆ ಬಂದಿದ್ದಳು. ಪ್ರಕರಣದ ಕುರಿತು ಪೊಲೀಸ್ ವಿಚಾರಣೆ ನಡೆಯುತ್ತಿದ್ದು ಇನ್ನಷ್ಟು ಮಾಹಿತಿ ಬಹಿರಂಗಗೊಳ್ಳಬೇಕಿದೆ.

    ಜೀವಂತ ಸುಟ್ಟುಹೋದಾಕೆಯ ಸಾವಿನ ಹಿಂದಿನ ಅಸಲಿ ಕಾರಣವೇ ಇದು!; ಅಪಾರ್ಟ್​ಮೆಂಟ್​ ಅಗ್ನಿ ಆಕಸ್ಮಿಕದ ಹಿಂದಿನ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts